ಉದಯವಾಹಿನಿ, ಅಬುಧಾಬಿ: ಯುಎಇಯಲ್ಲಿ ಇರಾನ್ ದಾಳಿಯ ವೀಡಿಯೋ ಮಾಡಿದವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 45 ಮಂದಿಯನ್ನು ಅಬುಧಾಬಿ ಪೊಲೀಸರು ಬಂಧಿಸಿದ್ದಾರೆ.

ಇರಾನ್‌ ನಡೆಸಿದ ದಾಳಿಯನ್ನು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ವಿವಿಧ ಭಾಗದ 45 ಜನರನ್ನು ಬಂಧಿಸಲಾಗಿದೆ. ದಾಳಿಯ ವೀಡಿಯೋ ಹಂಚಿಕೊಳ್ಳುವುದು ಸಾರ್ವಜನಿಕ ಅಭಿಪ್ರಾಯವನ್ನು ಪ್ರಚೋದಿಸುವ ಮತ್ತು ಸಮುದಾಯದಲ್ಲಿ ವದಂತಿಗಳನ್ನು ಹರಡಿ ದಾರಿತಪ್ಪಿಸುವ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದು ಪತ್ರಿಕೋದ್ಯಮ ಅಥವಾ ಎಲ್ಲಾ ರೆಕಾರ್ಡಿಂಗ್‌ನ ನಿಷೇಧವಲ್ಲ. ನೇರ ಭದ್ರತಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಕ್ಷ್ಮ ಅಥವಾ ಪರಿಶೀಲಿಸದ ವೀಡಿಯೋ, ಮಾಹಿತಿ ಹಂಚಿಕೊಳ್ಳುವುದರ ವಿರುದ್ಧದ ಕ್ರಮವಾಗಿದೆ.
ಮಾರ್ಚ್ ಮೊದಲ ವಾರ ಯುಎಇ ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸಿ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ದಾಳಿ ನಡೆದ ಸ್ಥಳಗಳ ಫೋಟೋ ತೆಗೆಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ತಪ್ಪಾದ ಮಾಹಿತಿ ಹಂಚಿಕೊಳ್ಳುವುದು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಬಹುದು. ದೇಶದ ನೈಜ ಪರಿಸ್ಥಿತಿಯ ಬಗ್ಗೆ ತಪ್ಪು ಅಭಿಪ್ರಾಯವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದರು

Leave a Reply

Your email address will not be published. Required fields are marked *

error: Content is protected !!