
ಉದಯವಾಹಿನಿ ಮುದಗಲ್: ಪಟ್ಟಣದ ವಿವಿಧ 10 ದುರ್ಗಾಗಳಲ್ಲಿ ಹತ್ತು ದಿನಗಳಿಂದ ನಡೆದ ಮೊಹರಂ ಹಬ್ಬಕ್ಕೆ ಶನಿವಾರ ತೆರೆ ಬಿದ್ದಿತು.ಇಲ್ಲಿನ ಮೊಹರಂ ವೀಕ್ಷಿಸಲು ದೇಶ ವಿದೇಶದ ಜನ ಇಲ್ಲಿಗೆ ಆಗಮಿಸಿ, ಜಿಲ್ಲೆ ಹಾಗೂ ತಾಲ್ಲೂಕು ಆಡಳಿತ ಜತೆ ಜತೆಯಾಗಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಪಾಲ್ಗೊಂಡರು.
ವೇಷಗಾರಿಕೆ, ಹಳ್ಳಳ್ಳಿ ಬುಕ್ಕ ಹೆಸರಿನಲ್ಲಿ ಮುಖಕ್ಕೆ ಕಪ್ಪು ಮಸಿ ಬಳಿದು ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಅಲಂಕೃತ ಟೋಪಿ ಧರಸಿ ಹರಕೆ ಹೊತ್ತ ಜನರು ತಾವು ಧರಿಸಿದ್ದ ಲಾಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಆಲಾಯಿ ಕುಣಿಯಲ್ಲಿ ಹಾಕಿ ಹರಕೆ ತೀರಿಸಿದರು. ಮೊಹರಂ ಕೊನೆ ದಿನವಾದ ಜು.29 ರಂದು ಪಟ್ಟಣದ 8 ಆಲಂ ದರ್ಗಾಗಳಿಂದ ಪಂಜಾಗಳು ಕೋಟೆ ಮುಂಭಾಗಕ್ಕೆ ತಂದರು. ಕೋಟೆಯ ಹೂರ ಭಾಗದಲ್ಲಿರುವ ಹಸನರ, ಕೋಟೆ ಒಳ ಭಾಗದಲ್ಲಿರುವ ಹುಸೇನರ ಬೆಳ್ಳಿ ಪಂಜಾಗಳನ್ನು ಮುಖಾಮುಖಿ ಮಾಡಿಸುವುದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದು ಮುಸ್ಲಿಮರು ಈ ದೃಶ್ಯವನ್ನು ನೋಡಿ ಕಣ್ತುಂಬಿಕೊಂಡರು. ಇಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಸುತ್ತದೆ. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರು, ಲಿಂಗಸುಗೂರು ಉಪವಿಭಾಗಾಧಿಕಾರಿ ಅವಿನಾಶ ಸಿಂಧೆ, ತಹಶೀಲ್ದಾರ್ ಡಿ.ಎಸ್. ಜಮಾದಾರ, ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ ಆದಾಪುರು, ಅಮೀರ್ ಬೇಗ್ ಉಸ್ತಾದ್, ಗುರುಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ನಬಿ, ಮೊಹ್ಮದ್ ಸಾದಿಕ್ ಅಲಿ ಸೇರಿದಂತೆ ಇನ್ನಿತರರು ಇದ್ದರು.
