ಉದಯವಾಹಿನಿ,ಕಾರಟಗಿ: ಶಿಕ್ಷಣದಿಂದ ಮಕ್ಕಳು ವಂಚಿತರಾದಲ್ಲಿ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲಾ. ಹಾಗೆಯೆ ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು. ಎಂದು ಶಿಕ್ಷಕ ರವಿರಾಮ್ ಹೇಳಿದರು. ೧೯೯೨-೯೩ ನೇ ಸಾಲಿನ ಪಟ್ಟಣದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸ್ಥಳಿಯ ಅಮ್ಮಾಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಗುರುವಂದನಾಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಬದುಕು ಬೆಳಗುವುದು ಸಮರ್ಪಕ ಶಿಕ್ಷಣದಿಮದ ಮಾತ್ರ ಸಾದ್ಯ. ಉತ್ತಮ ಶಿಕ್ಷಕ ಸಮಾಜಕ್ಕೆ ಮಾದರಿಯಾಗುತ್ತಾರೆ. ನಿವೃತ್ತರಾದ ಹಾಗೂ ಸೇವೆಯಲ್ಲಿರುವ ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವವನ್ನು ಸಮರ್ಪಿಸುವುದರ ಮೂಲಕ ಗುರುವಿನ ಶ್ರೇಷ್ಠತೆಯನ್ನು ತಿಳಿಸುವುದರ ಜೆತೆಗೆ ಉತ್ತಮ ಸಮಾಜ ನಿರ್ಮಾಣಮಾಡುವದರಲ್ಲಿ ಗುರುವಿನ ಪಾತ್ರ ಕೂಡ ಮಹತ್ವದ್ದು. ಮುಂದಿನ ಭವ್ಯ ಭವಿಷ್ಯದ ರೂವಾರಿಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಎಂದರು. ನ0ತರ ಶಿಕ್ಷಕಿ ಲಲೀತಾಬಾಯಿ ಮಾತನಾಡಿ ನೀವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತುಯಾವುದು ಕೊನೆಯವರೆಗೆ ಇರುವುದಿಲ್ಲಾ. ಆದರೆ ಗುವಿನಿಂದ ಕಲಿದ ವಿದ್ಯೆ ಮಾತ್ರ ನೀಮ್ಮ ಜೀವನದ ಕೊನೆಯವರೆಗೂ ಜತೆಗಿರುತ್ತದೆ ಎಂದರು.
ವಿದ್ಯಾರ್ಥಿ ಶರಣಪ್ಪ ಶ್ರೇಷ್ಠಿ ಯಾಡ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿದ್ಯಾರ್ಥಿಗಳು ತಮ್ಮ ಶಾಲಾ ದಿನವನ್ನು ಶಿಕ್ಷಕರೊಂದಿಗೆ ಮೆಲುಕು ಹಾಕಿ ಸಂಭ್ರಮಸಿದರು.
ಇದಕ್ಕೂ ಮುಂಚೆ ೯೨-೯೩ ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರಾದ ರವಿರಾಮ್, ಲಕ್ಷö್ಮಣ ಹುಲಗಿ, ರಾಮಣ್ಣ, ಲಿಂಗಯ್ಯ ಸರ್, ಪವಾಡೆಪ್ಪ,, ಲಲಿತಾಬಾಯಿ, ಶಿವಪ್ಪ ಇವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು. ವಿದ್ಯಾರ್ಥಿಗಳಾದ ಶಶೀಧರಸ್ವಾಮಿ ಹಿರೇಮಠ ಹಾಗೂ ಶಾರಧಾ, ಎಮ್.ಅಮರೇಗೌಡ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ೧೯೯೨-೯೩ ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನೀಯರು ಇದ್ದರು.
