
ಉದಯವಾಹಿನಿ ಕುಶಾಲನಗರ : ಕೊಡಗು ಜಿಲ್ಲೆಯ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆಗೊಳ್ಳಲಿದೆ ಎಂದು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಜೊತೆ ಸಭೆಯಲ್ಲಿ ಜಾಗ ಸಂಬ0ಧಿಸಿದ0ತೆ ಮಾಹಿತಿ ಪಡೆದು ಅವರು ಮಾತನಾಡಿದರು. ಈಗಾಗಲೇ ಕಂದಾಯ ಇಲಾಖೆಯಿಂದ ೬ ಕಡೆಗಳಲ್ಲಿ ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆ ಭೂಮಿ ಕಾಯ್ದಿರಿಸಿದ್ದು, ಆ ನಿಟ್ಟಿನಲ್ಲಿ ಟವರ್ ನಿರ್ಮಾಣ ಮಾಡಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಂಸದರು ಹೇಳಿದರು. ಈ 62 ಸ್ಥಳಗಳ ಜೊತೆಗೆ ಉಳಿದಂತೆ ಪೆರಾಜೆ, ಚೆಂಬು, ಮೇಲ್‌ಚೆಂಬು, ಒಣಚಲು, ವಿ.ಬಾಡಗ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಟವರ್ ಅಳವಡಿಕೆಗೆ ಬೇಡಿಕೆ ಇದ್ದು, ಅದನ್ನು ಸಹ ಪ್ರಸ್ತಾವನೆ ಪಡೆದು ಇನ್ನೂ ಹೆಚ್ಚಿನ ಟವರ್ ನಿರ್ಮಾಣ ಮಾಡಲಾಗುವುದು ಎಂದು ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಸಂಚಾರ ನಿಗಮ ವಿಭಾಗದ ಎಂಜಿನಿಯರ್ ಪೊನ್ನುರಾಜು ಅವರು ಜಿಲ್ಲೆಯ 103 ಗ್ರಾ.ಪಂ.ವ್ಯಾಪ್ತಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ. ಉಳಿದಂತೆ ಹಲವು ಕಡೆಗಳಲ್ಲಿ 2ಜಿ ಮತ್ತು 3ಜಿ ಒಳಗೊಂಡ ಬಿಎಸ್‌ಎನ್‌ಎಲ್ ಟವರ್ ಇದೆ. ಜೊತೆಗೆ 4ಜಿ ಆಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಿಎಸ್‌ಎಲ್‌ಎನ್ ಸಂಸ್ಥೆಯವರು ಸಾಧ್ಯವಾದಷ್ಟು ಹೆಚ್ಚಿನ ಬ್ಯಾಟರಿ ದಾಸ್ತಾನು ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ವಿದ್ಯುತ್ ವ್ಯತ್ಯಯ ಆಗಾಗ ಉಂಟಾಗುತ್ತಿದ್ದು, ಆದಷ್ಟು ವಿದ್ಯುತ್ ವ್ಯತ್ಯಯ ಉಂಟಾಗದAತೆ ಗಮನಹರಿಸಬೇಕು ಎಂದು ಸಂಸದರು ಸಲಹೆ ಮಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ೩ ಟವರ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇದ್ದು, ಇದನ್ನು ಪರಿಶೀಲಿಸಿ ವರದಿ ನೀಡಲಾಗುವುದು ಎಂದರು.
ಈ ಕುರಿತು ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜು0ಡೇಗೌಡ ಅವರು ಉಳಿದ ೩ ಅರಣ್ಯ ಪೈಸಾರಿ ಜಾಗವೆಂದು ದಾಖಲಾಗಿದ್ದು, ಈ ಬಗ್ಗೆ ಅಭಿಪ್ರಾಯ ನೀಡುವಂತೆ ತಿಳಿಸಿದರು. ತಾ.ಪಂ. ಇಒ ಶೇಖರ್, ಜಯಣ್ಣ, ಅಪ್ಪಣ್ಣ, ಇತರರು ಟವರ್ ಅಳವಡಿಸುವ ಸಂಬAಧ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆಗಳು ಇದ್ದರು.
