ಉದಯವಾಹಿನಿ ಕುಶಾಲನಗರ : ನಾವು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ನಮ್ಮ ಸುತ್ತಲಿನ‌ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು‌ ಬೆಳೆಸುವ ಮೂಲಕ
ಅರಣ್ಯ ಸಂರಕ್ಷಣೆಯೊಂದಿಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಕಾಲೇಜಿನ ಪ್ರಾಂಶುಪಾಲ‌ ಡಾ ಎನ್.ಎಸ್.ಸತೀಶ್ ಮನವಿ ಮಾಡಿದರು. ಅರಣ್ಯ  ಇಲಾಖೆ ಮಡಿಕೇರಿ.ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ  ಕಾವೇರಿ ಪರಿಸರ ಬಳಗ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು .ಕಾಲೇಜಿನ ಎನ್.ಎಸ್.ಎಸ್.ಘಟಕ ಹಾಗೂ ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಎಂಜಿನಿಯರಿಂಗ್  ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವನ ಮಹೋತ್ಸವ ಸಪ್ತಾಹ :2023 ರ ಅಂಗವಾಗಿ 250 ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
   “ಪರಿಸರ ಸಂರಕ್ಷಣೆ” ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿ ಮಾತನಾಡಿದ  ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಮಾತನಾಡಿ, ‘ಪ್ರತಿವರ್ಷ ನಾನಾ ಧ್ಯೇಯವಾಕ್ಯದೊಂದಿಗೆ ವನ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ‘ ನನ್ನ ಗಿಡ ನನ್ನ ಹೆಮ್ಮೆ’ ಧ್ಯೇಯವಾಕ್ಯದೊಂದಿಗೆ ಸಸಿ ನೆಡುವ ಸಪ್ತಾಹ ಆಚರಿಸಲಾಗುತ್ತಿದ್ದು, ಇಂತಹ ಹಸಿರು ನಿರ್ಮಾಣ ಅಭಿಯಾನದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
    ಕುಶಾಲನಗರ‌‌ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದನಾಗರಿಕರ ಸಹಭಾಗಿತ್ವದಲ್ಲಿ  ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 2500  ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್  ಎಂ.ಎನ್.ವೆಂಕಟನಾಯಕ್, ಮುಖ್ಯಸ್ಥ ಡಾ ಚೂಡಾ ರತ್ನಾಕರ್, ಮುಖ್ಯಸ್ಥ ಪರಶಿವಮೂರ್ತಿ, ಉಪನ್ಯಾಸಕರಾದ ಮಹೇಂದ್ರ, ಮಂಜುನಾಥ್, ಕಛೇರಿ ಅಧೀಕ್ಷಕಿ ಎಚ್.ಎ.ರೂಪ, ಡಿ ಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್, ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು,  ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!