ಉದಯವಾಹಿನಿ, ಬೀಜಿಂಗ್​ (ಚೀನಾ): ಪಶ್ಚಿಮ ಏಷ್ಯಾದಲ್ಲಿ ಸಂಘರ್ಷಕ್ಕೆ ಒಳಗಾಗಿರುವ ಇರಾನ್​, ಲೆಬನಾನ್​ ಮತ್ತಿತರ ಎರಡು ದೇಶಗಳಿಗೆ ತುರ್ತು ಮಾನವೀಯತೆಯ ನೆರವನ್ನು ನೀಡುವುದಾಗಿ ಚೀನಾ ತಿಳಿಸಿದೆ. ಚೀನಾದ ವಿದೇಶಾಂಗ ವಕ್ತಾರ ಲಿನ್​ ಜಿಯಾನ್​ ಮಾತನಾಡಿ, ಇರಾನ್​, ಜೋರ್ಡಾನ್​, ಲೆಬನಾನ್​ ಮತ್ತು ಇರಾಕ್​ ಸ್ಥಳೀಯ ಜನರಿಗೆ ಮಾನವೀಯಕತೆ ನೆರವು ನೀಡಲು ಬೀಜಿಂಗ್​ ನಿರ್ಧರಿಸಿದೆ ಎಂದಿದ್ದಾರೆ.
ಸದ್ಯ ನಡೆಯುತ್ತಿರುವ ಸಂಘರ್ಷದಿಂದಾಗಿ ಇರಾನ್​ ಮತ್ತು ಇತರೆ ಪ್ರಾದೇಶಿಕ ದೇಶಗಳು ಸಾಕಷ್ಟು ಹಾನಿಗೊಂಡಿದ್ದು, ಜನರು ತೀವ್ರ ಆತಂಕದಲ್ಲಿದ್ದಾರೆ. ಚೀನಾ ಆ ದೇಶಗಳ ಜನರಿಗೆ ಅತೀವ ಸಹಾನುಭೂತಿ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಒಂದು ಪ್ರಮುಖ ಮಾನವೀಯ ತುರ್ತುಸ್ಥಿತಿಯಾಗಿದ್ದು, ಪೀಡಿತ ಪ್ರದೇಶಗಳು ಈಗಾಗಲೇ ಸುಮಾರು 25 ಮಿಲಿಯನ್ ನಿರಾಶ್ರಿತರು, ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಆಶ್ರಯ ನೀಡಿವೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಇತ್ತೀಚೆಗೆ ತಿಳಿಸಿತ್ತು. ಈ ಕುರಿತು ಸಂಬಂಧಿತ ದೇಶಗಳಿಗೆ ಮಾನವೀಯ ನೆರವು ನೀಡುವ ಬಗ್ಗೆ ಚೀನಾ ಪರಿಗಣಿಸುತ್ತಿದೆಯೇ ಎಂದು ಮಾಧ್ಯಮಗಳು ಕೇಳಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಕ್ತಾರ, ಇರಾನ್​ನಲ್ಲಿ ಹಲವು ಮುಗ್ದ ನಾಗರಿಕರು ಯುದ್ಧ ಪರಿಣಾಮಕ್ಕೆ ಒಳಗಾಗಿದ್ದು, ಲೆಬನಾನ್​ನಲ್ಲಿ 8,00,000 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಜೋರ್ಡಾನ್​, ಇರಾಕ್​ ಮತ್ತಿತರ ದೇಶಗಳು ಕೂಡ ಯುದ್ಧದ ಪರಿಣಾಮಕ್ಕೆ ಒಳಗಾಗಿವೆ.

ಚೀನಾ ಈ ಯುದ್ಧಗಳು ಅಂತ್ಯಗೊಂಡು ಶಾಂತಿ ಕಾಪಾಡಲಿ ಎಂಬ ಪ್ರಯತ್ನವನ್ನು ಮುಂದುವರೆಸುತ್ತದೆ. ಈ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆಗೆ ಅನುಕೂಲತೆ ಕಲ್ಪಿಸುವುದು. ಮಾನವೀಯ ಬಿಕ್ಕಟ್ಟು ಮತ್ತಷ್ಟು ಹರಡುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.

ಇರಾನ್​-ಇಸ್ರೇಲ್​- ಅಮೆರಿಕದ ನಡುವಿನ ಸಂಘರ್ಷದಲ್ಲಿ ಇರಾನ್​ ಶಾಲೆಯ ಮೇಲೆ ನಡೆದ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ಚೀನಾ ತಕ್ಷಣಕ್ಕೆ 2,00,000 ಡಾಲರ್​ ತುರ್ತು ಮಾನವೀಯತೆ ನೆರವನ್ನು ಘೋಷಿಸಿದೆ.

ಇಸ್ರೇಲ್ ಜೊತೆಗಿನ ಯುದ್ಧ ಆರಂಭವಾದಾಗಿನಿಂದ ಮತ್ತು ಅಮೆರಿಕ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯವರ ಹತ್ಯೆ ಬೆನ್ನಲ್ಲೇ ಟೆಹ್ರಾನ್‌ನ ಆಪ್ತ ಮಿತ್ರ ರಾಷ್ಟ್ರವಾದ ಚೀನಾ, ಕದನ ವಿರಾಮದೊಂದಿಗೆ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡುತ್ತಿದೆ.

ಚೀನಾ ಇರಾನ್‌ನ ಪ್ರಮುಖ ಆರ್ಥಿಕ ಬೆಂಬಲಿಗನಾಗಿದ್ದು, ಇರಾನ್ ವಿದೇಶಗಳಲ್ಲಿ ಮಾರಾಟ ಮಾಡುವ ತೈಲದ ಸುಮಾರು 90ರಷ್ಟನ್ನು ಖರೀದಿಸುತ್ತಿದೆ. 2025ರಲ್ಲಿ, ಈ ವ್ಯಾಪಾರವು ಟೆಹ್ರಾನ್‌ಗೆ ಸುಮಾರು 31.2 ಬಿಲಿಯನ್‌ ಡಾಲರ್​ ನೀಡಿದೆ. ಇರಾನ್​ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಚೀನಾ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!