ಉದಯವಾಹಿನಿ, ಹೈದರಾಬಾದ್ (ತೆಲಂಗಾಣ)​: 2008ರ ಬಲಿಮೇಲದಲ್ಲಿ ನಡೆದ ನಕ್ಸಲ್​ ಕಾರ್ಯಾಚರಣೆಯಲ್ಲಿ ಹುತಾತ್ಮರಾದ 32 ಗ್ರೇಹೌಂಡ್ಸ್​ ಕಮಾಂಡೋ ಮತ್ತು ಓರ್ವ ಸಬ್​ ಇನ್ಸ್​ಪೆಕ್ಟರ್​ ಕುಟುಂಬ ಸದಸ್ಯರಿಗೆ ಮನೆ ಪಟ್ಟಾ(ಆಸ್ತಿ ಪತ್ರ)ಗಳನ್ನು ತೆಲಂಗಾಣ ಡಿಜಿಪಿ ಬಿ ಶಿವದಾರ್​ ರೆಡ್ಡಿ ಹಸ್ತಾಂತರಿಸಿದರು. ಈ ಮೂಲಕ 18 ವರ್ಷದ ಕಾಯುವಿಕೆ, ನೋವು ಮತ್ತು ಅನಿಶ್ಚಿತತೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
2008ರ ಜೂನ್​ನಲ್ಲಿ ಒಡಿಶಾ ಗಡಿಯಲ್ಲಿರುವ ಚಿತ್ರಕೊಂಡ ಬಳಿಯ ಬಲಿಮೇಲ ಮೀಸಲು ಪ್ರದೇಶದಲ್ಲಿ ನಡೆದ ನಕ್ಸಲ್​ ಕಾರ್ಯಾಚರಣೆಯಲ್ಲಿ ಗ್ರೇಹೌಂಡ್ಸ್​ ಕಮಾಂಡೋ ಸೇರಿದಂತೆ 38 ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಹುತಾತ್ಮರ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ 200ಚದರ್​ ಅಡಿಯ ಭೂಮಿಯನ್ನು ನೀಡುವುದಾಗಿ 2013ರಲ್ಲಿ ಸರ್ಕಾರ ಘೋಷಿಸಿತ್ತು. ಆದರೆ, ಗಜುಲರಮರಮ್​ನಲ್ಲಿನ ಭೂ ವಿವಾದದಿಂದಾಗಿ ಈ ಹಸ್ತಾಂತರ ಪ್ರಕ್ರಿಯೆ ನೆನಗುದಿಗೆ ಬಿದ್ದಿತ್ತು. ಹಲವು ವರ್ಷಗಳ ಆಡಳಿತಾತ್ಮಕ ತಡೆ ಇದೀಗ ಅಂತಿಮವಾಗಿ ತೆರವಾಗಿದ್ದು, ಕಳೆದ ಅಕ್ಟೋಬರ್​ನಲ್ಲಿ ಈ ಕುರಿತು ಮತ್ತೊಂದು ಹೊಸ ಆದೇಶ ಜಾರಿ ಮಾಡಲಾಗಿತ್ತು. ಅದರಂತೆ ಮಂಗಳವಾರ ಸಂತ್ರಸ್ತ ಕುಟುಂಬಗಳಿಗೆ ಆಸ್ತಿ ಪತ್ರ ನೀಡಲಾಗಿದೆ.ಇದರಲ್ಲಿ 33 ಕುಟುಂಬಗಳು ಫಲಾನುಭವಿಗಳಾಗಿದ್ದಾರೆ. ಇದೀಗ ಆಸ್ತಿ ಪತ್ರ ನೀಡಿರುವ ಡಿಜಿಪಿ ರೆಡ್ಡಿ, ಘಟನೆ ಸಂದರ್ಭದಲ್ಲಿ ವಿಶೇಷ ಗುಪ್ತಚರ ದಳದ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿದ್ದು, ಈ ಕುರಿತು ದಾಖಲೆಗಳನ್ನು ವೈಯಕ್ತಿಕವಾಗಿ ಅವರು ಹಸ್ತಾಂತರ ಮಾಡಿದ್ದರು.

ಈ ದುಃಖ ಮತ್ತು ನೋವಿನ ಭಾವನಾತ್ಮಕ ಕ್ಷಣದ ನಡುವೆ ಡಿಜಿಪಿ, 20 ವರ್ಷಗಳಿಂದ ಬೆಂಬಲ ಮತ್ತು ಮನ್ನಣೆಗೆ ಕಾದು ಕುಳಿತಿದ್ದ ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು, ಗ್ರೇಹೌಂಡ್ಸ್​ ಸಿಬ್ಬಂದಿಗಳ ಧೈರ್ಯವನ್ನು ಪ್ರಶಂಸಿದ್ದು, ಅವರ ಇತ್ತೀಚಿನ ಸಾಧನೆಯನ್ನು ತಿಳಿಸಿದರು. 024 ರ ವಿಶೇಷ ಕಾರ್ಯಾಚರಣೆಗಳಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು ಪಡೆದ ಗ್ರೇಹೌಂಡ್ಸ್ ಕಮಾಂಡರ್ ರಾಘವೇಂದ್ರ ರೆಡ್ಡಿ, ಹಿರಿಯ ಕಮಾಂಡೋಗಳಾದ ತಿಪ್ಪಾಣಿ ರಾಕೇಶ್ ಮತ್ತು ಉದತನೂರಿ ಮಲ್ಲಯ್ಯ; ಮತ್ತು ಜೂನಿಯರ್ ಕಮಾಂಡೋ ಗಂಟಾ ಸಾಯಿಕುಮಾರ್ ಸೇರಿದಂತೆ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.

ಪ್ರತ್ಯೇಕ ಮಾತುಕತೆಯಲ್ಲಿ ಅವರು ಸದ್ಯ ಹೆಚ್ಚುತ್ತಿರುವ ಸೈಬರ್​ ಅಪರಾಧವನ್ನು ಹತ್ತಿಕ್ಕಬೇಕಿದೆ ಎಂದು ಒತ್ತಿ ಹೇಳಿದರು. ತೆಲಂಗಾಣ ಸೈಬರ್​ ಭದ್ರತೆ ಬ್ಯೂರೋ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಜನರಿಗೆ ಸೈಬರ್​ ಅಪರಾಧ ಕುರಿತು ಜಾಗೃತಿ ಮೂಡಿಸಬೇಕಿದ್ದು, ಜನರು ಎಚ್ಚರಿದಿಂದ ಇರುವಂತೆ ತಿಳಿಸಿದರು. ಮಾಧ್ಯಮಗಳು ಈ ರೀತಿ ಜಾಗೃತಿಯಲ್ಲಿ ಪ್ರಮುಖವಾಗಿದ್ದು, ಸೈಬರ್​ ಬೆದರಿಕೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!