ಉದಯವಾಹಿನಿ, ತಿರುಪತಿ(ಆಂಧ್ರ ಪ್ರದೇಶ): ಇಂಟರ್​(ಪಿಯುಸಿ) ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವಂತೆ ಮಾಡಲು ಶಿಕ್ಷಕರೊಬ್ಬರು ಕೇವಲ ಒಂದು ರೂಪಾಯಿ ಶುಲ್ಕ ಪಡೆದು ರಾಷ್ಟ್ರಮಟ್ಟದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್​​ನಲ್ಲಿ ಅಣಕು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಆಂಧ್ರದ ಅನ್ನಮಯ್ಯ ಜಿಲ್ಲೆಯ ನಿಮ್ಮನಪಲ್ಲೆ ಮಂಡಲದ ಮಂಚುಗುಂಟಪಲ್ಲೆ ಗ್ರಾಮದ ಶಿಕ್ಷಕ ರೆಲ್ಲಾ ರೆಡ್ಡೆಪ್ಪ ಅವರು ಆರ್ಥಿಕ ಸಮಸ್ಯೆ ಪ್ರತಿಭೆಗಳಿಗೆ ಅಡ್ಡಿಯಾಗಬಾರದು ಎಂಬ ಸದುದ್ದೇಶದಿಂದ, ಇಂಟರ್​​ ವಿದ್ಯಾರ್ಥಿಗಳು ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾಗಿ ಸಿದ್ಧತೆ ನಡೆಸಲು ಅನುವಾಗುವಂತೆ ಆನ್‌ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.

www.mpcexam.com ವೆಬ್‌ಸೈಟ್ ಮೂಲಕ, ವಿದ್ಯಾರ್ಥಿಗಳು ಸ್ವತಂತ್ರವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮತ್ತು ತಾವೇ ಮೌಲ್ಯಮಾಪನ ಮಾಡಿಕೊಳ್ಳಲು ಒಂದು ರೂಪಾಯಿ ಶುಲ್ಕವನ್ನು ಪಾವತಿಸಬಹುದು. ಶಿಕ್ಷಕ ರೆಡ್ಡೆಪ್ಪ ಅವರು ಅಗತ್ಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಅವುಗಳನ್ನು ವೇದಿಕೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದಾರೆ.

24/7 ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಬೇಕಾದರೂ ವಿದ್ಯಾರ್ಥಿಗಳು ಲ್ಯಾಪ್‌ಟಾಪ್, ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ ಈ ವೇದಿಕೆಯಲ್ಲಿ ಅಣಕು ಪರೀಕ್ಷೆಗಳನ್ನು ಎದುರಿಸಬಹುದು ಮತ್ತು ಫಲಿತಾಂಶಗಳನ್ನು ತಕ್ಷಣವೇ ಪಡೆಯಬಹುದು.

ಈ ವೆಬ್‌ಸೈಟ್​ನಲ್ಲಿ ವಿದ್ಯಾರ್ಥಿಗಳು ಕೇವಲ 1 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಜೆಇಇ ಮುಖ್ಯ, ಜೆಇಇ ಅಡ್ವಾನ್ಸ್ಡ್ ಮತ್ತು ನೀಟ್‌ನಂತಹ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಮಾದರಿಯಲ್ಲಿ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಅನೇಕ ವಿದ್ಯಾರ್ಥಿಗಳು ಪ್ರತಿಭೆ ಹೊಂದಿದ್ದಾರೆ, ಆದರೆ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಅವಕಾಶಗಳ ಕೊರತೆಯಿದೆ. ಈ ವೇದಿಕೆಯು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಅವರ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಲು ನೆರವಾಗಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಶಿಕ್ಷಕ ರೆಡ್ಡೆಪ್ಪ ಹೇಳಿದರು.

 

Leave a Reply

Your email address will not be published. Required fields are marked *

error: Content is protected !!