ಉದಯವಾಹಿನಿ, ಬೆಂಗಳೂರು: ಗೆಳೆಯ ಅಂತ ಮೊಬೈಲ್ ಪಾಸ್‌ವರ್ಡ್ ಕೊಟ್ಟಿದ್ದಕ್ಕೆ ಆತನ ಫೋನ್‌ನಿಂದಲೇ 4.5 ಲಕ್ಷ ರೂ. ಮೌಲ್ಯದ ಆನ್‌ಲೈನ್ ಶಾಪಿಂಗ್ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಸ್ನೇಹಿತ ಚಿಂತನ್ ಆರೋರಾನ ಫೋನ್ ಬಳಸಿ ನವೀನ್ ವೆಮುಲ ಶಾಪಿಂಗ್ ಮಾಡಿ, ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇಬ್ಬರು ಸ್ನೇಹಿತರು ಬೆಂಗಳೂರಿನ ಕೋರಮಂಗಲದ ಕೆಹೆಎಚ್‌ಬಿ ಕಾಲೋನಿಯಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದರು. ಇಬ್ಬರು ಕೂಡ ಆತ್ಮೀಯರಾಗಿದ್ದ ಕಾರಣ ಮೊಬೈಲ್ ಪಾಸ್‌ವರ್ಡ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಮಾ.6ರಂದು ಇಬ್ಬರು ತಡರಾತ್ರಿವರೆಗೂ ಪಾರ್ಟಿ ಮಾಡಿದ್ದರು. ಈ ವೇಳೆ ಚಿಂತನ್ ಮಲಗುವ ಮುನ್ನ ನವೀನ್‌ಗೆ ತನ್ನ ಮೊಬೈಲ್ ಪಾಸ್‌ವರ್ಡ್ ಹೇಳಿ ಮಲಗಿದ್ದ. ಮಾರನೇ ದಿನ ಬೆಳಗ್ಗೆ ಆರು ಗಂಟೆಗೆ ಎದ್ದು ನೋಡಿದಾಗ ನವೀನ್ ನಾಪತ್ತೆಯಾಗಿದ್ದ. ಮೊಬೈಲ್ ಓಪನ್ ಮಾಡಿದಾಗ ನವೀನ್ 4,45,870 ರೂ. ಹಣ ಖರ್ಚು ಮಾಡಿ, ವಿವಿಧ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿರೋದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಉಳಿದ ಹಣವನ್ನು ವಿವಿಧ ಬ್ಯಾಂಕ್ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.

ಸದ್ಯ ಸ್ನೇಹಿತನ ದೋಖಾದಿಂದ ಶಾಕ್ ಆದ ಚಿಂತನ್ ಆರೋರಾ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!