ಉದಯವಾಹಿನಿ, ಗದಗ: ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧನ ಮಾಡಲಾಗಿದೆ.ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎಸ್‌ಟಿ (ST) ಜನಾಂಗದ ರೈತನ ಜಮೀನಿನಲ್ಲಿ ದಲಿತ ವ್ಯಕ್ತಿ ನೀರಿನ ಬಳಕೆ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ 21 ಜನರ ಬಂಧನ ಮಾಡಲಾಗಿದೆ ಎಂದು ಗದಗ ಎಸ್‌ಪಿ ರೋಹನ್ ಜಗದೀಶ್ ಹೇಳಿದ್ದಾರೆ.
ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಎಸ್‌ಸಿ ಹಾಗೂ ಎಸ್‌ಟಿ ಜನರ ಮಧ್ಯೆ ಈ ಗಲಾಟೆ ನಡೆದಿತ್ತು. ಎಸ್‌ಟಿ ಜನಾಂಗ ರೈತನ ಜಮೀನಿನಲ್ಲಿ ನೀರಿನ ಹೊಂಡ ಇದೆ. ಅದರಲ್ಲಿ ಎಸ್‌ಸಿ ಯುವಕರು ಈಜಲು ಹೋಗಿದ್ದರು. ಬೇಸಿಗೆಯಲ್ಲಿ ಅನಾವಶ್ಯ ನೀರು ಹಾಳು ಮಾಡಬೇಡಿ. ಜನ ಜಾನುವಾರುಗಳಿಗೆ ನೀರಿಲ್ಲ ಎಂದು ಅದಕ್ಕೆ ಎಸ್‌ಟಿ ರೈತ ವಿರೋಧ ಮಾಡಿದ್ದ.
