ಉದಯವಾಹಿನಿ, ಖೋರ್ಧಾ: ಕಲೆ ಮತ್ತು ಕಲಾವಿದನ ದೃಷ್ಟಿ ಕಸವನ್ನು ರಸವಾಗಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಒಡಿಶಾದ ಈ ಹಿರಿಯ ಮಹಿಳೆ. ಹಸುವಿನ ಸಗಣಿಯ ಕರಕುಶಲದ ಸೇರಿದಂತೆ ಪೇಪಿಯರ್ ಮುಖವಾಡ ಸೇರಿದಂತೆ ಅಸಂಖ್ಯಾತ ಕಲೆಯ ಮೂಲಕ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದ್ದಾರೆ 60 ವರ್ಷದ ಮಂಜುಲತಾ ಮೊಹಾಪಾತ್ರ. ಸಗಣಿಯಿಂದ ಮಾಡುವ ಈ ಕಲೆಗಳು ಸಂಪ್ರದಾಯಿಕ ಕಲೆಗಳನ್ನು ಜೀವಂತವಾಗಿರಿಸಿವೆ.
ಒಡಿಶಾದ ಬೆಗುನಿಯಾ ಬ್ಲಾಕ್‌ನ ಕರದ್ಗಾಡಿಯಾ ಗ್ರಾಮದ ಮಂಜುಲತಾ ಇಲ್ಲಿನ ಜಾನಪದ ಕರಕುಶಲ ಪದ್ಧತಿಗಳನ್ನು ಸಂರಕ್ಷಿಸುವುದರ ಜೊತೆಗೆ ದಶಕಗಳಿಂದ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಈ ಕಲೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಅವುಗಳನ್ನು ಕಲಿಸುವ ಮೂಲಕ ಇದನ್ನು ಗಡಿಯನ್ನೂ ಮೀರಿ ವಿಸ್ತರಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಕರಕುಶಲತೆ ಮೂಲಕ ವಿದೇಶಿಗರನ್ನು ಸೆಳೆಯುತ್ತಿರುವ ಮಂಜುಲತಾ
ಬಾಲ್ಯದಿಂದಲೇ ಅವರ ಈ ಪ್ರಯಣ ಆರಂಭವಾಗಿತ್ತು. ನಾನು ಬಾಲ್ಯದಿಂದಲೇ ಈ ಕೆಲಸ ಮಾಡುತ್ತಿದ್ದೇನೆ. ಮೊದಲು ತಂದೆ ಮನೆಯಲ್ಲಿ ಈ ಕೆಲಸ ಮಾಡುತ್ತಿದ್ದೆ, ಈ ಅತ್ತೆ- ಮಾವನ ಮನೆಯಲ್ಲಿ ಮುಂದುವರೆಸಿದ್ದೇನೆ ಅಂತಾರೆ ಮಂಜುಲತಾ. ಈ ಕಲೆ ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಗ್ರಾಹಕರನ್ನು ಕಂಡುಕೊಂಡಿದೆ. ಇದಕ್ಕೆ ಅವರು ಹೊಸ ಸ್ಪರ್ಶ ನೀಡಿದ್ದಾರೆ.
ಅವರ ಕೆಲಸವು ಪೇಪಿಯರ್-ಮಾಚೆ ಮುಖವಾಡಗಳು ಮತ್ತು ಸ್ಥಳೀಯವಾಗಿ ಕಂಧೇಯಿ ಎಂದು ಕರೆಯಲ್ಪಡುವ ಹಸುವಿನ ಸಗಣಿಯಿಂದ ರೆಡಿ ಮಾಡುವ ಪ್ರತಿಮೆಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಈ ಸೃಷ್ಟಿಗಳು, ದೇವತೆಗಳು ಮತ್ತು ಪ್ರಾಣಿಗಳಿಂದ ಅಲಂಕಾರಿಕ ವಸ್ತುಗಳವರೆಗೆ ಇದೆ. ಪ್ರತಿಯೊಂದು ತುಣುಕು ಸಾಂಸ್ಕೃತಿಕ ಸ್ಮರಣೆ ಮತ್ತು ಕ್ರಿಯಾತ್ಮಕ ವಿನ್ಯಾಸ ಎರಡನ್ನೂ ಪ್ರತಿಬಿಂಬಿಸುತ್ತದೆ. ತಾಂತ್ರಿಕವಾಗಿ ಮುಂದುವರಿದ ಆಯ್ಕೆಗಳಿಂದ ಪ್ರಾಬಲ್ಯ ಹೊಂದಿರುವ ಮಾರುಕಟ್ಟೆಯಲ್ಲಿ ಅವರ ಕರಕುಶಲತೆಯು ಅದರ ನೈಸರ್ಗಿಕ ಸಂಯೋಜನೆಯೊಂದಿಗೆ ಎದ್ದು ಕಾಣುತ್ತಿರುವುದು ವಿಶೇಷವಾಗಿದೆ.
