
ಉದಯವಾಹಿನಿ ಮಾಲೂರು:- ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸುಮಾರು ವರ್ಷಗಳು ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಬೇಕಾದರೆ ಲಂಚ ನೀಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಹಾಗೂ ಬಾವನಹಳ್ಳಿ ಗ್ರಾಮದ ರೈತರು ಭೂಮಿಯ ಬಳಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು,ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ ಮಾಲೂರು ತಾಲೂಕಿನ ಬಾವನಹಳ್ಳಿ ಗ್ರಾಮದ ರೈತರಾದ ಕುಮಾರ್, ಮುನಿನಾರಾಯಣಪ್ಪ, ರಂಗಪ್ಪ, ಅಣ್ಣಯ್ಯಪ್ಪ, ನಾರಾಯಣಪ್ಪ, ಶ್ರೀನಿವಾಸ್, ಮಂಜುನಾಥ್, ಪಾಯ್ಯಸ್ ಭಾಯ್, ಕೃಷ್ಣಪ್ಪ, ಇನ್ನೂ ಬಾವನಹಳ್ಳಿ ಹಾಗೂ ಗ್ರಾಮದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸುಮಾರು ವರ್ಷಗಳು ಕಳೆದರೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ಇನ್ನೂ ಪರಿಹಾರ ನೀಡಿಲ್ಲ.ಬಾವನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೈಗಾರಿಕೆಗಾಗಿ ಸುಮಾರು 722 ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದ್ದಾರೆ. ಪರಿಹಾರಕ್ಕಾಗಿ ಸುಮಾರು ವರ್ಷಗಳು ಕೆಐಎಡಿಬಿ ಕಚೇರಿಗೆ ಅಲೆದಾಡಿದರು ಪರಿಹಾರ ಸಿಗಲಿಲ್ಲ. ಅದರಲ್ಲಿ 270 ರೈತರಿಗೆ ಪರಿಹಾರ ಸಿಕ್ಕಿದ್ದು ಇನ್ನೂ ಉಳಿದ ಭೂಮಿಗೆ ಪರಿಹಾರಕ್ಕೆ ಕೆಐಎಡಿಬಿ ಕಚೇರಿಗೆ ತೆರಳಿದರೆ ಒಂದು ಎಕರೆಗೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಹಣ ನೀಡುವಂತೆ ಅಲ್ಲಿನ ಅಧಿಕಾರಿ ಅಪೂರ್ವ ಬಿದರಿ ಅವರು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.ಭೂಮಿಯಲ್ಲಿ ಬೆಳೆದಿದ್ದ ಮಾವಿನ ಗಿಡಕ್ಕೂ ಸಹ ಪರಿಹಾರ ನೀಡುತ್ತಿಲ್ಲ ಅದನ್ನ ಪ್ರಶ್ನಿಸಿದರೆ ರೈತರ ಮೇಲೆ ದೌರ್ಜನ್ಯಮಾಡಿ ಕೇಸು ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದು, ಇನ್ನೂ ಕೆಐಎಡಿಬಿ ಅಧಿಕಾರಿ ಅಪೂರ್ವ ಬಿದರಿ ಅವರು ನಾನು ಸಚಿವ ಎಂ.ಬಿ.ಪಾಟೀಲ್ ಹಾಗೂ ಶಂಕರ್ ಬಿದರಿ ಸಂಬಧಿಗಳೆಂದು ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ.ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೆಐಎಡಿಬಿಗೆ ಸ್ವಾಧೀನವಾದ ಭೂಮಿಗೆ ಪರಿಹಾರ ಆದಷ್ಟು ಬೇಗ ನೀಡಬೇಕು ಹಾಗೂ ಅಧಿಕಾರಿ ಅಪೂರ್ವ ಬಿದರಿ ಅವರನ್ನು ವಜಾಗೊಳಿಸಿ ವರ್ಗಾವಣೆ ಮಾಡಬೇಕು ಇಲ್ಲವಾದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್,ಜಿಲ್ಲಾ ಗೌರವಾಧ್ಯಕ್ಷ ಬಡಗಿ ಶ್ರೀನಿವಾಸ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆಂಜಿಕನ್ನಡಿಗ, ಗೌರವಾಧ್ಯಕ್ಷ ಡಿ.ಎನ್.ಗೋಪಾಲ್, ಆಟೋಘಟಕದ ಅಧ್ಯಕ್ಷ ಎಂ.ಜೆ.ಶ್ರೀನಿವಾಸ್, ತಾಲ್ಲೂಕು ಪ್ರದಾನ ಕಾರ್ಯದರ್ಶಿ ಕೆ.ಎನ್.ಜಗದೀಶ್, ದೊಡ್ಡಮಲ್ಲೆ ಚಲಪತಿಗೌಡ, ಮಾದನಹಟ್ಟಿ ಅಶೋಕ್, ನಾಗೇಶ್, ನಂದೀಶ್, ಕಸಬಾ ಅಧ್ಯಕ್ಷ ರಾಜು, ಕಾರ್ಮಿಕ ಘಟಕ ಆನಂದ್ ಸೇರಿದಂತೆ ಗ್ರಾಮದ ರೈತರು ಪಾಲ್ಗೊಂಡಿದ್ದರು.
