ಉದಯವಾಹಿನಿ ಕೆ.ಆರ್.ಪೇಟೆ: ತಾಲ್ಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರಿಗೆ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ೧೩ ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ವತಿಯಿಂದ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಬೆಂಗಳೂರಿನ ನಯನ ಕಲಾ ಮಂದಿರದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಂಬಗಿಯ ಸುಕ್ಷೇತ್ರ ಮಹಾಸಿದ್ದೇಶ್ವರ ಮಠದ ಪ.ಪೂ.ಸುರೇಶ್ ಮಹಾರಾಜರು ಮಾತನಾಡಿ ಇಂದಿನ ಸಮಾಜದಲ್ಲಿ ಸಾಧನೆ ಮಾಡುವುದೇ ಒಂದು ದೊಡ್ಡ ಸಾಧನೆಯಾಗಿದೆ. ಸಾಧಕರು ಸಾಯುತ್ತಾರೆ ಆದರೆ ಅವರು ಮಾಡಿದ ಸಾಧನೆಗಳು ಸಾಯುವುದಿಲ್ಲ ಎಂಬ ನಾಣ್ನುಡಿಯಂತೆ ಸಾಧನೆ ಮಾಡುವುದು ಸುಲಭದ ಮಾತಲ್ಲ ನಿರಂತರ ಪರಿಶ್ರಮ, ಶ್ರದ್ದೆ, ಆಸಕ್ತಿ, ಸತತ ಪ್ರಯತ್ನ ಮುಂತಾದುವುಗಳನ್ನು ಹಗಲಿರುಳು ಓರೆಗೆ ಹಚ್ಚಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ವಿವಿಧ ಭಾಗಗಳ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ನೀಡುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು ಮಾತನಾಡಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಪ್ರತೀ ವರ್ಷವೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಾ ಬಂದಿದ್ದು ಅದರಂತೆ ಈ ಬಾರಿಯೂ ಶಿಕ್ಷಣ ಕ್ಷೇತ್ರದÀಲ್ಲಿ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ತಾಲ್ಲೂಕಿನ ಶಿಕ್ಷಕರಾದ ಆರ್.ಬಿ.ಚಂದ್ರ, ಬಿ.ಆರ್.ರಮೇಶ್, ಎಸ್.ಡಿ.ನಾಗಣ್ಣ, ಕೆ.ಮಂಜೇಗೌಡ ರವರಿಗೆ ಪ್ರಜಾಭೂಷಣ ಪ್ರಶಸ್ತಿಗಳನ್ನು ನೀಡುತ್ತಿರುವುದು ಸಂತಸ ತಂದಿದೆ. ಅವರ ಈ ಸೇವೆ ಅವಿರತವಾಗಿ ಮುಂದುವರಿಯಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಅನಂತಕುಮಾರ್ ಬ್ಯಾಕೂಡ, ರಕ್ಷಿತಾ ಭರತ್ ಕುಮಾರ್ ಈಟಿ, ಸರಸ್ವತಿ ಈಟಿ, ದೀಪ ಪ್ರಜ್ವಲನೆ, ಅಶೋಕ್ ಛಲವಾದಿ, ಮಂಜುಳನಾರಾಯಣ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!