ಉದಯವಾಹಿನಿ, ಕೀವ್​ (ಉಕ್ರೇನ್‌): ಉಕ್ರೇನ್​ ಮೇಲೆ ರಷ್ಯಾ ಮಂಗಳವಾರ ರಾತ್ರಿ ಸುಮಾರು 400 ಕ್ಷಿಪಣಿ ಮತ್ತು ಡ್ರೋನ್​​ಗಳನ್ನು ಹಾರಿಸಿದ್ದು, 6 ಮಂದಿ ಸಾವಿಗೀಡಾಗಿ, 46 ಜನರು ಗಾಯಗೊಂಡಿದ್ದಾರೆ. ಮಿಸೈಲ್​ಗಳು ಜನವಸತಿ ಪ್ರದೇಶಗಳ ಮೇಲೆ ಬಿದ್ದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಕೀವ್​ ಸೇರಿದಂತೆ 7 ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಇದು ಕಳೆದ ವಾರಗಳಲ್ಲಿಯೇ ಅತಿದೊಡ್ಡ ದಾಳಿಯಾಗಿದೆ. ಇರಾನ್​ ಮಾದರಿಯ ಶಾಹೆದ್​ ಡ್ರೋನ್​ಗಳನ್ನು ಅದು ಹಾರಿಬಿಟ್ಟಿದೆ. ಇದರಿಂದ, ಭಾರಿ ಹಾನಿ ಸಂಭವಿಸಿದೆ ಎಂದು ಉಕ್ರೇನ್​​ನ ವಿದೇಶಾಂಗ ಸಚಿವರ ಆಂಡ್ರಿ ಸಿಬಿಹಾ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತ, ಉಕ್ರೇನ್​ ವಾಯುಪಡೆಯೂ ಭೀಕರ ದಾಳಿಯನ್ನು ದೃಢಪಡಿಸಿದೆ. ಮಂಗಳವಾರ ರಾತ್ರಿಯಿಡೀ ಸುಮಾರು ಡ್ರೋನ್​ಗಳು ಮತ್ತು ಕ್ಷಿಪಣಿಗಳು ಹಾರಿ ಬಂದಿವೆ. ಅದರಲ್ಲಿ 23 ಕ್ರೂಸ್ ಕ್ಷಿಪಣಿಗಳು ಮತ್ತು ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ. ಕನಿಷ್ಠ 10 ಪ್ರದೇಶಗಳಲ್ಲಿ ಇವುಗಳ ಬಿದ್ದಿವೆ ಎಂದಿದೆ.
ಡ್ನಿಪ್ರೊ ನಗರದಲ್ಲಿ ಹಗಲು ವೇಳೆ ನಡೆದ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 13 ಜನರು ಗಾಯಗೊಂಡರು. ಮತ್ತೊಂದು ದಾಳಿಯು ಎಲ್ವಿವ್‌ ನಗರದ ಅಪಾರ್ಟ್ಮೆಂಟ್ ಬ್ಲಾಕ್ ಮೇಲೆ ಆಗಿದೆ. ಅಲ್ಲಿ 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುನೆಸ್ಕೋ ತಾಣದ ಮೇಲೆ ದಾಳಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಗುರುತಿಸಲಾಗಿರುವ 17ನೇ ಶತಮಾನದ ಸೇಂಟ್ ಆಂಡ್ರ್ಯೂಸ್ ಚರ್ಚ್‌ ಮೇಲೆ ದಾಳಿ ನಡೆದಿದೆ. ಇದರಿಂದ, ಚರ್ಚ್​ಗೆ ಬೆಂಕಿ ಹೊತ್ತಿಕೊಂಡು ಹಾನಿಯಾಗಿದೆ. ಇನ್ನೊಂದೆಡೆ, ಆಸ್ಪತ್ರೆಗಳು ಮತ್ತು 10 ಜನವಸತಿ ಕಟ್ಟಡಗಳ ಮೇಲೆ ದಾಳಿಯಾಗಿದೆ. 6 ವರ್ಷದ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದ ಇತ್ತೀಚೆಗೆ ದಾಳಿಗಳನ್ನು ತೀವ್ರಗೊಳಿಸಿದೆ. ಕಳೆದ ನಾಲ್ಕು ದಿನಗಳಲ್ಲಿ 619 ಬಾರಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್​ ನಡೆಸುವ ದಾಳಿಯನ್ನೂ ಎದುರಿಸಲು ಸಿದ್ಧತೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *

error: Content is protected !!