ಉದಯವಾಹಿನಿ, ಮಾಸ್ಕೋ: ಹಾರ್ಮುಜ್‌ ಜಲಸಂಧಿಯ ಬಿಕ್ಕಟ್ಟು ಪೂರ್ಣಪ್ರಮಾಣದಲ್ಲಿ ಇನ್ನೂ ಬಗೆಹರಿಯದ ಹಿನ್ನೆಲೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನ ಮುಂದುವರಿಸಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮುಂದಿನ ತಿಂಗಳು ವಿತರಣೆಗಾಗಿ ಭಾರತ ಸುಮಾರು 6 ಕೋಟಿ ಬ್ಯಾರಲ್‌ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬ್ರೆಂಟ್‌ ಕಚ್ಚಾ ತೈಲಕ್ಕಿಂತ ಪ್ರತಿ ಬ್ಯಾರಲ್‌ಗೆ 5 ರಿಂದ 15 ಡಾಲರ್‌ವರೆಗಿನ ಪ್ರೀಮಿಯಂನಲ್ಲಿ ಬುಕ್‌ ಮಾಡಲಾಗಿದೆ. ಇದು ಕಳೆದ ಫೆಬ್ರವರಿಯಲ್ಲಿ ಭಾರತ ಖರೀದಿಸಿದ ತೈಲಕ್ಕಿಂತ 2 ಪಟ್ಟು ಹೆಚ್ಚಾಗಿದೆ.
ಈಗ ಬುಕಿಂಗ್‌ ಮಾಡಲಾದ 60 ಮಿಲಿಯನ್‌ ಬ್ಯಾರಲ್‌ ಕಚ್ಚಾತೈಲವು ಮುಂದಿನ ತಿಂಗಳು ಭಾರತವನ್ನ ತಲುಪಲಿದೆ. ಇದರಿಂದ ದೇಶದಲ್ಲಿ ಬಹುತೇಕ ತೈಲ ಕೊರತೆ ಸರಿದೂಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಇದಕ್ಕೂ ಮುನ್ನವೇ ಅಮೆರಿಕವು ತೈಲ ಖರೀದಿ ಮೇಲಿನ ನಿರ್ಬಂಧವನ್ನ ತಾತ್ಕಾಲಿಕವಾಗಿ ತೆಗೆದುಹಾಕಿದ ಹಿನ್ನೆಲೆ ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕ ಹೊಂದಿರುವ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ 50 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದೆ.

Leave a Reply

Your email address will not be published. Required fields are marked *

error: Content is protected !!