ಉದಯವಾಹಿನಿ, ಇಸ್ಲಮಾಬಾದ್ : ಜೈಲಿನಲ್ಲಿರುವ ಪತ್ನಿ ಬುಷ್ರಾ ಬೀಬಿ ಅವರನ್ನು ಕೂಡ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ.
ಹೆಂಡತಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮೂಲಕ ಅಧಿಕಾರಿಗಳು ತಮ್ಮನ್ನು “ಬ್ಲ್ಯಾಕ್‍ಮೇಲ್” ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.ಈದ್ ಹಬ್ಬದ ಸಂದರ್ಭದಲ್ಲಿ ಪುತ್ರ ಕಾಸಿಮ್ ಖಾನ್ ಅವರೊಂದಿಗೆ ದೂರವಾಣಿ ವೇಳೆ ಈ ಆರೋಪ ಮಾಡಿದ್ದು ಪದೇ ಪದೇ ನಾವು ನ್ಯಾಯಾಂಗದ ಮೊರೆ ಹೋಗಿದ್ದೇವೆ, ಆದರೆ ಅವರು ವೈಯಕ್ತಿಕ ಲಾಭಕ್ಕಾಗಿ ತಮ್ಮ ಆತ್ಮಗಳನ್ನು ಮಾರಿದ್ದಾರೆ” ಎಂದು ಹೇಳಿದ್ದಾರೆ.

ಜೈಲಿನಲ್ಲಿರುವ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಮನವರಿಕೆ ಆದ ಮೇಲೆ ಪತ್ನಿಯನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯ ಬ್ಲಾಕ್ ಮೇಲೆ ತಂತ್ರ ಎಂದಿದ್ದಾರೆ.ತಂದೆ ಇಮ್ರಾನ್ ಖಾನ್ ಜೊತೆಗಿನ ಮಾತುಕತೆಯ ವಿವರಗಳನ್ನು ಖಾಸೀಂ ಖಾನ್ ಹಂಚಿಕೊಂಡಿದ್ದು ಜೈಲಿನಲ್ಲಿ ಅಧಿಕಾರಿಗಳು ತಂದೆ ಮತ್ತು ತಾಯಿ ಇಬ್ಬರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ನಮಗೆ ಈಗ ಇರುವುದು ನ್ಯಾಯಾಂಗ ಮೇಲೆ ನಂಬಿಕೆ ಅಷ್ಟೇ ಎಂದು ತಿಳಿಸಿದ್ದಾರೆ.ಇಮ್ರಾನ್ ಖಾನ್ ಅವರು ಒಂದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ನ್ಯಾಯಾಲಯದ ಸೂಚನೆ ಮೇರೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ, ದೇಶದ ಮಾಜಿ ಪ್ರಧಾನಿಗೆ ಚಿಕಿತ್ಸೆ ಕೊಡಿಸಲು ನ್ಯಾಯಾಂಗದ ಮೊರೆ ಹೋಗಿದ್ದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕುಟುಂಬ ಜೈಲಿನಲ್ಲಿ ನಡೆಸಿಕೊಂಡ ದೌರ್ಜನ್ಯದ ಆರೋಪ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಆರೋಪವನ್ನು ನಿರಾಕರಿಸಿದ್ದಾರೆ. ಇಮ್ರಾನ್ ಖಾನ್ ಮತ್ತು ಬೀಬಿ ಆಸ್ತಿ ಟ್ರಸ್ಟ್ ಮತ್ತು ಐಷಾರಾಮಿ ಉಡುಗೊರೆಗಳನ್ನು ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.ಡಿಸೆಂಬರ್ 2024 ರಲ್ಲಿ, ಇಬ್ಬರಿಗೂ ಮತ್ತೊಂದು ಪ್ರಕರಣದಲ್ಲಿ ಹೊಸ ಶಿಕ್ಷೆಯನ್ನು ನೀಡಲಾಯಿತು, ಇದು ಅವರ ಜೈಲುವಾಸದ ಅವಧಿಯನ್ನು ಈಗ ಮತ್ತೆ ವಿಸ್ತರಿಸಲಾಗಿದೆ.ಜನವರಿಯಿಂದ ಬೀಬಿಯನ್ನು ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!