ಉದಯವಾಹಿನಿ, ಕ್ಯಾನ್ಬೆರಾ :  ಇರಾನ್‌ ಯುದ್ದ ಕೊನೆಗೊಳ್ಳಲು ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಹಿಡಿಯುವುದು ಅತ್ಯಂತ ಅಗತ್ಯ ಎಂದು ಯುರೋಪಿಯನ್‌ ಯೂನಿಯನ್‌ ಮುಖ್ಯಸ್ಥೆ ಉರ್ಸುಲಾ ವಾನ್‌ ಡೆರ್‌ ಲೇಯೆನ್‌ ಹೇಳಿದ್ದಾರೆ. ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌‍ ಅವರೊಂದಿಗೆ ಮಾತುಕತೆ ನಂತರ ಲೇಯೆನ್‌ ಅವರು ನೀಡಿರುವ ಈ ಹೇಳಿಕೆ ಭಾರೀ ಮಹತ್ವ ಪಡೆದಿದೆ.ಇರಾನ್‌ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಯ ಮೂಲಕ ಶಾಂತಿ ಸ್ಥಾಪನೆಯ ಅಗತ್ಯವನ್ನು ಒತ್ತಿ ಹೇಳಿ, ಸಂಘರ್ಷದಿಂದ ವಿಶ್ವದಲ್ಲಿ ಎದುರಾಗಿರುವ ಪರಿಸ್ಥಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ನಾವು ಮಾತುಕತೆಯ ಮೂಲಕ ಪರಿಹಾರಕ್ಕೆ ಬರುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು ಇದು ಮಧ್ಯಪ್ರಾಚ್ಯದಲ್ಲಿ ನಾವು ನೋಡುವ ಹಗೆತನವನ್ನು ಕೊನೆಗೊಳಿಸುತ್ತದೆ ಎಂದು ವಾನ್‌ ಡೆರ್‌ ಲೇಯೆನ್‌ ಕ್ಯಾನ್‌ ಪ್ರತಿಪಾದಿಸಿದರು.

ಯುದ್ಧ ಮುಗಿದ ನಂತರ ಹಾರ್ಮುಜ್‌ ಜಲಸಂಧಿಯನ್ನು ರಕ್ಷಿಸುವ ಧ್ಯೇಯದಲ್ಲಿ ಸಹಾಯ ಮಾಡಲು ಕೆಲವು ದೇಶಗಳು ತಯಾರಿ ನಡೆಸುತ್ತಿವೆ ಎಂದರು. ಅನಿಲ ಮತ್ತು ತೈಲ ಬೆಲೆಗಳು, ನಮ ವ್ಯವಹಾರಗಳು ಮತ್ತು ನಮ ಸಮಾಜಗಳ ಮೇಲೆ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ ಎಂದು ಹೇಳಿದರು. ವಿಶ್ವದಾದ್ಯಂತ ಇಂಧನ ಪೂರೈಕೆ ಮಾರ್ಗಗಳಿಗೆ ಯುದ್ಧ ನಿಲ್ಲುವುದು ನಿರ್ಣಾಯಕವಾಗಿದೆ ಎಂದರು.ಡೊನಾಲ್ಡ್ ಟ್ರಂಪ್‌ ಅವರು ಎರಡೂ ದೇಶಗಳು ರಚನಾತಕ ಮಾತುಕತೆಗಳನ್ನು ನಡೆಸಿವೆ ಎಂದು ಹೇಳಿದ ಮೇಲೂ, ಅಮೆರಿಕ ಮತ್ತು ಇರಾನ್‌ ನಡುವಿನ ಮಾತುಕತೆಗಳ ಬಗ್ಗೆ ಇನ್ನೂ ಗೊಂದಲವಿದೆ. ಇರಾನಿನ ಅಧಿಕಾರಿಗಳು ಎರಡೂ ರಾಷ್ಟ್ರಗಳ ನಡುವೆ ಯಾವುದೇ ಮಹತ್ವದ ಮಾತುಕತೆಗಳನ್ನು ನಿರಾಕರಿಸಿದರು ಮತ್ತು ನಂತರ ಶ್ವೇತಭವನವು ಪರಿಸ್ಥಿತಿ ದುರ್ಬಲ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!