ಉದಯವಾಹಿನಿ, ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇರುವ ಅಪೋಲೋ ಓಷನ್ ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದ್ದು ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ. ಕತಾರಿನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್ ಸರಕು ಹಡಗು ಗುಜರಾತಿನ ಮುದ್ರಾ ಬಂದರಿಗೆ ಮಾ.16ಕ್ಕೆ ಬಂದಿತ್ತು. ಈ ಹಡಗು ನಂತರ ಮಂಗಳೂರಿಗೆ ಬರಬೇಕಿತ್ತು. ಆದರೆ ಶಿವಾಲಿಕ್‌ನಲ್ಲಿದ್ದ ಎಲ್ಲಾ ಸರಕನ್ನು ಗುಜರಾತಿನ ಮುದ್ರಾ ಬಂದರಿನಲ್ಲಿ ಇಳಿಸಲಾಗಿತ್ತು. ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನುಈ ಅಪೊಲೊ ಓಷನ್ ಹಡಗಿಗೆ ತುಂಬಿಸಲಾಗಿತ್ತು.
ಬಂದರು ಅಧಿಕಾರಿಗಳು ಇನ್ನೂ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳು ಶೀಘ್ರದಲ್ಲೇ ಮಂಗಳೂರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!