ಉದಯವಾಹಿನಿ, ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಸಿ ಹೆಚ್ಚುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಸೃಷ್ಟಿ ವದಂತಿ ಹೆಚ್ಚಾಗುತ್ತಿದೆ. ಇನ್ನೊಂದು ವಾರ ಕಳೆದ್ರೆ ಪೆಟ್ರೋಲ್ ಸಿಗಲ್ಲ, ಡೀಸೆಲ್ ಸಿಗಲ್ಲ ಅನ್ನೋ ಸುಳ್ಳು ಸುದ್ದಿಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ವದಂತಿಗಳಿಂದ ಬೆದರಿದ ಜನರು ಪೆಟ್ರೋಲ್, ಡೀಸೆಲ್ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. 100, 200 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಳ್ಳುವವರು ಕೂಡಾ ಫುಲ್ ಟ್ಯಾಂಕ್ ಮಾಡಿಸಿಕೊಳ್ಳೋಕೆ ನಿಂತಿದ್ದಾರೆ.
ಇದರಿಂದ ರಾಜ್ಯದ ಬಂಕ್‌ಗಳ ಎದುರು ಜನಜಾತ್ರೆ ಸೃಷ್ಟಿ ಆಗುತ್ತಿದೆ. ಬೆಂಗಳೂರು , ಚಿಕ್ಕಬಳ್ಳಾಪುರ, ಬೀದರ್, ರಾಯಚೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂಕ್‌ಗಳಿಗೆ ವಾಹನ ಸವಾರರು ಮುಗಿಬೀಳುತ್ತಿದ್ದಾರೆ.ಕೊಲ್ಲಿಯುದ್ಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿ ಬೆನ್ನುಬಿದ್ದ ಜನರು ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಪೆಟ್ರೋಲ್ ಅಭಾವವಿಲ್ಲ. ಗಾಬರಿ ಬೇಡ. ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ ಅಭಾವ ಸೃಷ್ಟಿ ಆಗಿಲ್ಲ. ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ ಇಲ್ಲ, ಗದ್ದಲ ಇಲ್ಲ. ಪೆಟ್ರೋಲ್ ಆರಾಮಾಗಿ ಸಿಗ್ತಿದೆ. ಊಹಾಪೋಹ ಸೃಷ್ಟಿ ಮಾಡಬೇಡಿ ಅಂತಾ ಬಂಕ್ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!