ಉದಯವಾಹಿನಿ, ಲುಧಿಯಾನ (ಪಂಜಾಬ್​): ಚಿಕ್ಕಂದಿನಲ್ಲಿ ಮಕ್ಕಳು ಅಜ್ಜಿ ಅಥವಾ ಅಮ್ಮ ಹೊಲಿಗೆ ಹಾಕಿ ಬಟ್ಟೆ ತಯಾರಿಸುವುದು, ನೂಲಿನಿಂದ ಬಣ್ಣಬಣ್ಣದ ಇತರ ವಸ್ತುಗಳನ್ನು ರೂಪಿಸುವುದನ್ನು ನೋಡಿ ತಾವೂ ಇದನ್ನು ಕಲಿಯಬೇಕು ಎಂದು ಆಸಕ್ತಿ ವಹಿಸುತ್ತಾರೆ.
ಹೀಗೇ, ಸಣ್ಣ ವಯಸ್ಸಿನಲ್ಲಿ ವಂಶಿಕಾ ಮಿತ್ತಲ್​ ಎಂಬಾಕೆ ಕ್ರೋಚೆಟ್ ನೂಲು ಮತ್ತು ಸೂಜಿಯಿಂದ ಅಜ್ಜಿ ತಯಾರಿಸುತ್ತಿದ್ದ ವಸ್ತುಗಳ ಬಗ್ಗೆ ತೀವ್ರ ಕುತೂಹಲಿಯಾಗಿದ್ದಳು. ಈ ಕರಕುಶಲತೆಯನ್ನು ಕಲಿಯಲು ಆಕೆ ಪ್ರಯತ್ನಿಸಿದರು. ಅದೇ ನೂಲು ಮತ್ತು ಕ್ರೋಚೆಟ್ ಸೂಜಿ ಒಂದು ದಿನ ತಮ್ಮನ್ನು ಬಹುಕೋಟಿ ಉದ್ಯಮದ ಮಾಲೀಕಿಯನ್ನಾಗಿ ಮಾಡುತ್ತದೆ. ನೂರಾರು ಮಹಿಳೆಯರಿಗೆ ಉದ್ಯೋಗ ಕೊಡುವಂತೆ ಮಾಡುತ್ತದೆ ಎಂದು ಆಕೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.

ಹೌದು. 20 ವರ್ಷದ ವಂಶಿಕಾ ಮಿತ್ತಲ್ ಇಂದು ‘ಫ್ಲೋರಿಯಲ್’ ಎಂಬ ಕ್ರೋಚೆಟ್ ಆಧಾರಿತ ಸ್ಟಾರ್ಟ್‌ಅಪ್ ಕಂಪನಿ ಸ್ಥಾಪಿಸಿದ್ದಾರೆ. ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ಅವರ ಕಂಪನಿಯ ಮೌಲ್ಯ ಈಗ ಸುಮಾರು 12 ಕೋಟಿ ರೂಪಾಯಿಗಳಿಗೇರಿದೆ. ವಾರ್ಷಿಕ 6 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಈ ಸಂಸ್ಥೆ, ಅನುಭವಿ ಉದ್ಯಮಿಗಳು ವರ್ಷಗಟ್ಟಲೆ ದುಡಿದು ಸಾಧಿಸುವ ಗುರಿಯನ್ನು ಕೇವಲ ಎರಡೇ ವರ್ಷಗಳಲ್ಲಿ ತಲುಪಿದೆ. ₹1 ಸಾವಿರದಿಂದ ಆರಂಭ, ಇಂದು ಕೋಟಿ ರೂಪಾಯಿ ವಹಿವಾಟು: ವಂಶಿಕಾ ಅವರ ಈ ಔದ್ಯೋಗಿಕ ಪಯಣ ಮನೆಯಲ್ಲಿ ಆಕೆಯ ಅಜ್ಜಿ ದಾರದಿಂದ ಸುಂದರವಾದ ವಿನ್ಯಾಸಗಳನ್ನು ಹೆಣೆಯುವುದನ್ನು ನೋಡುವುದರಿಂದ ಆರಂಭವಾಯಿತು ಎಂದರೆ ಹಲವರಿಗೆ ನಂಬಲು ಸಾಧ್ಯವಿಲ್ಲ. ಆಕೆ ಮೊದಲು ತಯಾರಿಸಿದ ಕ್ರೋಚೆಟ್ ಹೂಗುಚ್ಛ ಸ್ನೇಹಿತರಿಗೆ ತುಂಬಾ ಇಷ್ಟವಾಯಿತು. ಕಾಲೇಜು ವೇಳೆ ತನ್ನ ಕೈಯಿಂದ ಮಾಡಿದ ಕ್ರೋಚೆಟ್ ಹೂವುಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಅಲ್ಲಿಂದ ಉದ್ಯಮವನ್ನು ನಿಧಾನವಾಗಿ ಬೆಳೆಸಿದೆ. ಅದು ಈಗ ಸ್ಥಿರವಾಗಿದೆ ಎಂದು ವಂಶಿಕಾ ಅವರು ಹೇಳುತ್ತಾರೆ.  ಕಾಲೇಜು ದಿನಗಳಿಂದಲೇ ಕ್ರೋಚೆಟ್​ ಹೂವು ಉದ್ಯಮ ಆರಂಭಿಸಬೇಕು ಎಂಬ ಗುರಿ ಹೊಂದಿದ್ದರು. 1 ಸಾವಿರ ರೂಪಾಯಿಗಳಿಂದ ಆರಂಭಿಸಿದ ಈ ಉದ್ಯಮ ಇಂದು ಕೋಟ್ಯಂತರ ರೂಪಾಯಿ ಆರ್ಡರ್​ಗಳನ್ನು ಪಡೆಯುವಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಮೊದಲು ಸ್ಥಳೀಯರಿಂದ ಬರುತ್ತಿದ್ದ ಆರ್ಡರ್‌ಗಳು ಈಗ ದೇಶದ ವಿವಿಧೆಡೆಯಂದ ಬರತೊಡಗಿವೆ. ಇಂದು ‘ಫ್ಲೋರಿಯಲ್’ ಉತ್ಪನ್ನಗಳು ದೇಶಾದ್ಯಂತ ಮಾರಾಟವಾಗುವುದಲ್ಲದೆ, ಬ್ಲಿಂಕ್​ ಇಟ್‌ನಂತಹ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲೂ ಲಭ್ಯವಿವೆ.

Leave a Reply

Your email address will not be published. Required fields are marked *

error: Content is protected !!