ಉದಯವಾಹಿನಿ,  ಇರಾನ್​ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಆದರೆ, ಆ ದೇಶದ ನಾಯಕರಿಗೆ ತಮ್ಮ ಜನರಿಂದ ಅಥವಾ ಅಮೆರಿಕದಿಂದ ಹತ್ಯೆಯಾಗುವ ಭಯವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ.
ಇರಾನ್​ ಮುಖ್ಯಸ್ಥನ ಹುದ್ದೆ ಈಗ ಯಾರೂ ಬಯಸದ ಕೆಲಸವಾಗಿದೆ ಎಂದು ವಾಷಿಂಗ್ಟನ್‌ನಲ್ಲಿ ನಡೆದ ವಾರ್ಷಿಕ ರಾಷ್ಟ್ರೀಯ ರಿಪಬ್ಲಿಕನ್ ಕಾಂಗ್ರೆಸ್ ಸಮಿತಿಯ ನಿಧಿ ಸಂಗ್ರಹಣೆ ಭೋಜನಕೂಟದಲ್ಲಿ ಅವರು ಟೀಕಿಸಿದರು.
ನಾವು 8 ಯುದ್ದಗಳನ್ನು ಅಂತ್ಯಗೊಳಿಸಿದ್ದು, ಇದೀಗ ಮತ್ತೊಂದು ಯುದ್ದ ಗೆಲ್ಲುತ್ತಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಇರಾನ್​ ಜೊತೆಗೆ ನಾವು ಮಾಡುತ್ತಿರುವ ಕೆಲಸವನ್ನು ಯಾರೂ ನೋಡುತ್ತಿಲ್ಲ. ಅವರು ಮಾತುಕತೆ ನಡೆಸುತ್ತಿದ್ದಾರೆ. ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಕಷ್ಟು ಬಯಸುತ್ತಿದ್ದಾರೆ. ಆದರೆ, ತಮ್ಮ ಜನರಿಂದಲೇ ಹತ್ಯೆಗೀಡಾಗುವ ಭಯ ಅವರಿಗಿದೆ ಎಂದರು.

2020ರ ಜನವರಿ 3ರಂದು ಅಮೆರಿಕದ ಆದೇಶದ ಮೇರೆಗೆ ಇರಾನ್​ನಲ್ಲಿ ನಡೆಸಲಾದ ಡ್ರೋನ್​ ದಾಳಿಯಲ್ಲಿ ಸಾವನ್ನಪ್ಪಿದ ಇರಾನಿನ ಮೇಜರ್ ಜನರಲ್ ಮತ್ತು ಕುಡ್ಸ್ ಪಡೆಯ ಕಮಾಂಡರ್ ಖಾಸಿಮ್ ಸೊಲೈಮಾನಿ ಹತ್ಯೆಯನ್ನು ಟ್ರಂಪ್ ನೆನಪಿಸಿಕೊಂಡರು.ಸೊಲೈಮಾನಿಯನ್ನು ದುಷ್ಟ ಮನುಷ್ಯ ಎಂದು ಕರೆದ ಟ್ರಂಪ್, ನಾಯಕತ್ವವನ್ನು ಶ್ವಾಘಿಸಿ, ಕಠಿಣ ಜನರಲ್​ ಎಂದರು.

ಯುದ್ದ ಅಂತ್ಯಗೊಳಿಸಲು ಮಧ್ಯವರ್ತಿಗಳ ಮೂಲಕ 15 ಅಂಶಗಳ ಕದನ ವಿರಾಮ ಯೋಜನೆಯನ್ನು ಇರಾನ್‌ಗೆ ಕಳುಹಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.ಆದರೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸರ್ಕಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ನಮ್ಮ ಸರ್ಕಾರ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಾವು ಯಾವುದೇ ಮಾತುಕತೆಗಳನ್ನು ಯೋಜಿಸುವುದಿಲ್ಲ ಎನ್ನುವ ಮೂಲಕ ಅಮೆರಿಕದ ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಯುದ್ದ ಕೊನೆಗಳಿಸಲು ನಾವು ನಮ್ಮದೇ ಆದ ಬೇಡಿಕೆ ಹೊಂದಿದ್ದೇವೆ ಎಂದು ಇರಾನ್‌ನ ಅನಾಮಧೇಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!