ಉದಯವಾಹಿನಿ, ರಶ್ಮಿಕಾ, ವಿಜಯ್ ದೇವರಕೊಂಡ ಮದುವೆಯ ಬಳಿಕ ಮೊದಲ ಪ್ರವಾಸಕ್ಕೆ ತೆರಳಿದ್ದು, ಸ್ವಚ್ಛಂದವಾಗಿ ವಿಹರಿಸಲು ಥಾಯ್ಲೆಂಡ್ ದೇಶವನ್ನು ಆರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಇದು ಹನಿಮೂನ್ ಅಲ್ವಂತೆ. ಇದನ್ನು ಬಡ್ಡೀಮೂನ್ ಎಂದು ಕರೆಯಬೇಕೆಂಬ ಟ್ರೆಂಡ್‌ಗೆ ಭಾರತದಲ್ಲಿ ಚಾಲನೆ ಕೊಟ್ಟಿದ್ದಾರೆ ಈ ಕಪಲ್. ಮದುವೆ ಬಳಿಕ ದಂಪತಿ ಇಬ್ಬರೇ ಪ್ರವಾಸಕ್ಕೆ ಹೋದರೆ ಅದು ಹನಿಮೂನ್. ಸ್ನೇಹಿತರ ಸಮೇತ ತೆರಳಿದ್ರೆ ಅದನ್ನ ಬಡ್ಡೀಮೂನ್ ಎಂದು ಕರೆಯುವ ಪದ್ಧತಿ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಡ್ಡೀಮೂನ್‌ಗೆ ತೆರಳಿದ್ದಾರೆ. ಬೆಸ್ಟ್ ಬಡ್ಡೀಸ್ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ ರಶ್ಮಿಕಾ ವಿಜಯ್.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪ್ರವಾಸ ಪ್ರಿಯರಾಗಿದ್ದು, ಈಗಾಗ್ಲೇ ಅನೇಕ ಬಾರಿ ಒಟ್ಟಿಗೆ ಪ್ರಯಾಣ ಮಾಡಿದ್ದರು. ಮದುವೆಗೂ ಮುನ್ನ ಇಬ್ಬರೂ ಒಬ್ರಿಗೊಬ್ಬರನ್ನ ಹೈಡ್ ಮಾಡಿ, ಫೋಟೋಸ್ ಪೋಸ್ಟ್ ಮಾಡುತ್ತಾ ಬಂದಿದ್ದರು. ಇದೀಗ ಈ ಜೋಡಿ ಪ್ರವಾಸದ ಸ್ಥಳದಲ್ಲಿ ಸ್ವಚ್ಛಂದವಾಗಿ ವಿಹರಿಸಿದೆ. ಈ ಕುರಿತ ವಿಡಿಯೋವನ್ನ ವಿರೋಶ್ ಜೋಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಸಾಮಾನ್ಯವಾಗಿ ಮದುವೆ ಬಳಿಕ ಖಾಸಗಿತನಕ್ಕೆ ಧಕ್ಕೆ ಬರದಿರಲೆಂದು ದಂಪತಿ ಮಾತ್ರವೇ ಪ್ರವಾಸಕ್ಕೆ ಹೋಗುವುದು ವಾಡಿಕೆ. ಇದೀಗ ಬಡ್ಡೀಮೂನ್ ಹೆಚ್ಚು ಪ್ರಚಲಿತದಲ್ಲಿರದ ಭಾರತದಲ್ಲೀಗ ರಶ್ಮಿಕಾ ಹಾಗೂ ವಿಜಯ್ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಫ್ರೆಂಡ್ಸ್ ಜೊತೆ ಮದುವೆ ಬಳಿಕ ಪ್ರವಾಸಕ್ಕೆ ತೆರಳುವುದೇ ಇದರ ವಿಶೇಷ. ಬ್ಯಾಚುಲರೇಟ್ ಪಾರ್ಟಿ ಮಾಡುವ ವಿದೇಶಿ ಸಂಸ್ಕೃತಿಯನ್ನ ಭಾರತೀಯರು ಅಳವಡಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!