ಉದಯವಾಹಿನಿ, ಭಾರತೀಯ ಸೇನೆಯ ಸಾಹಸಗಾಥೆಗಳನ್ನು ತೆರೆಗೆ ತರುವ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಪಹಲ್ಲಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಕಥೆಯನ್ನು ಆಧರಿ. ಬಾಲಿವುಡ್‌ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಲಿದೆ.
‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಿರ್ಮಾಪಕ ಭೂಷಣ್ ಕುಮಾರ್ ಈ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಕೆಜೆಎಸ್ ‘ಟೈನಿ’ ಧಿಲ್ಲೋನ್ ಅವರ ಪುಸ್ತಕವನ್ನು ಆಧಾರವಾಗಿ ತೆಗೆದುಕೊಂಡು ಸಿನಿಮಾ ರೂಪುಗೊಳ್ಳಲಿದೆ ಎನ್ನಲಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ನೈಜ ಘಟನಾ ಸ್ಥಳಗಳಲ್ಲೂ ಶೂಟಿಂಗ್ ನಡೆಯಲಿದೆ. ಈ ಚಿತ್ರವು 2025ರ ಮೇ ತಿಂಗಳಲ್ಲಿ ನಡೆದ ಘಟನೆಗಳನ್ನಾಧರಿಸಿಕೊಂಡಿದ್ದು, ಆಪರೇಷನ್‌ನ ಒಳನೋಟವನ್ನು ನೈಜತೆಯೊಂದಿಗೆ ತೆರೆಗೆ ತರುವ ಉದ್ದೇಶ ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇದನ್ನು ಕೇವಲ ಸಿನಿಮಾ ಎಂದು ಅಲ್ಲ, ದೇಶದ ಶೌರ್ಯವನ್ನು ದಾಖಲಿಸುವ ಪ್ರಯತ್ನವೆಂದು ತಂಡ ಹೇಳಿದೆ. ಪಹಲ್ಲಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಪ್ರವಾಸಿಗರ ಹತ್ಯೆ ನಡೆದ ಬಳಿಕ, ಭಾರತ ‘ಆಪರೇಷನ್ ಸಿಂದೂರ್’ ಮೂಲಕ ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ಕಾರ್ಯಾಚರಣೆ ದೇಶದ ಭದ್ರತೆಗೆ ಮಹತ್ವದ ತಿರುವಾಗಿ ಪರಿಣಮಿಸಿತ್ತು.
ಚಿತ್ರದ ಕಲಾವಿದರ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ ವಿಷಯದ ಗಂಭೀರತೆಯಿಂದಾಗಿ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *

error: Content is protected !!