ಉದಯವಾಹಿನಿ, ಬೇಸಿಗೆಯ ಬಿಸಿಲಿನ ಶಾಖ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯನ ಅಧಿಕ ತಾಪಮಾನದಿಂದ ಪರಿಹಾರ ಪಡೆಯಲು ಅನೇಕ ಜನರು ತಂಪು ಪಾನೀಯ, ರಿಫ್ರೆಶ್ ಜ್ಯೂಸ್‌ಗಳು ಹಾಗೂ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಈ ತಂಪು ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಿ ಕುಡಿದು ಆನಂದಿಸುತ್ತಾರೆ.

ಮನೆ ಪಾನೀಯಗಳನ್ನು ತಯಾರಿಸುವಂತಹ ಉತ್ಸಾಹಿಗಳಿಗಾಗಿಯೇ ನಾವು ಇಂದು ಹೊಸ ತಂಪು ಪಾನೀಯ ಪರಿಚಯಿಸುತ್ತಿದ್ದೇವೆ. ಅದುವೇ ಬಾದಾಮಿ ಮಿಲ್ಕ್ ಶೇಕ್. ಈ ವಿಧಾನವನ್ನು ಬಳಸಿಕೊಂಡು ಸಖತ್​ ಟೇಸ್ಟಿಯಾದ ಬಾದಾಮಿ ಮಿಲ್ಕ್​ ಶೇಕ್​ ತಯಾರಿಸಿದರೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಇಷ್ಟವಾಗುತ್ತದೆ. ಸಂತೋಷದಿಂದ ಒಂದು ಗ್ಲಾಸ್​ ಬದಲಿಗೆ ಎರಡು ಗ್ಲಾಸ್ ಕುಡಿಯುತ್ತಾರೆ. ಸೂಪರ್ ತಂಪು ಪಾನೀಯ ಬಾದಾಮಿ ಮಿಲ್ಕ್​ ಶೇಕ್​ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಬಾದಾಮಿ – ಅಗತ್ಯಕ್ಕೆ ತಕ್ಕಷ್ಟು
ಹಾಲು – 1 ಲೀಟರ್
ಕೇಸರಿ – ಒಂದು ಚಿಟಿಕೆ
ಕಸ್ಟರ್ಡ್ ಪೌಡರ್ – ಒಂದೂವರೆ ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಸಕ್ಕರೆ – 6 ಟೀಸ್ಪೂನ್
ಪಿಸ್ತಾ – 1 ಟೀಸ್ಪೂನ್
ಗೋಡಂಬಿ – 1 ಟೀಸ್ಪೂನ್

ಅಧಿಕ ಬಿಸಿಲಿನಿಂದ ಪರಿಹಾರ ಪಡೆದುಕೊಳ್ಳಲು ತುಂಬಾ ರುಚಿಕರವಾದಬಾದಾಮಿ ಮಿಲ್ಕ್​ ಶೇಕ್ ತಂಪು ಪಾನೀಯ ಸಿದ್ಧಪಡಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಸುಮಾರು 20 ಬಾದಾಮಿಗಳನ್ನು ಇರಿಸಿ, ಅವುಗಳನ್ನು ಮುಚ್ಚಲು ಸಾಕಷ್ಟು ನೀರು ಸೇರಿಸಬೇಕಾಗುತ್ತದೆ. ಇವುಗಳನ್ನು ಒಂದು ಗಂಟೆ ನೆನೆಸಲು ಬಿಡಬೇಕಾಗುತ್ತದೆ.
ಒಂದು ಗಂಟೆಯ ಬಳಿಕ ಬಾದಾಮಿಯಿಂದ ಸಿಪ್ಪೆ ತೆಗೆದು, ಬ್ಲಾಂಚ್ ಮಾಡಿದ ಬೀಜಗಳನ್ನು ಪ್ರತ್ಯೇಕ ಬಟ್ಟಲಿನಲ್ಲಿ ಇಡಿ.
ಹೆಚ್ಚುವರಿಯಾಗಿ ಉಳಿದ ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!