ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಜಾಗತಿಕ ಇಂಧನ ವಲಯದಲ್ಲಿ ಭಾರಿ ಅನಿಶ್ಚಿತತೆ ಎದುರಾಗಿದ್ದು, ಇದರ ಎಫೆಕ್ಟ್ ಭಾರತದ ಇಂಧನ ಕ್ಷೇತ್ರದ ಮೇಲೂ ಸಹ ಬಿದ್ದಿದೆ. ಇದರಿಂದಾಗಿ ಅಡುಗೆಗಾಗಿ ಎಲ್‌ಪಿಜಿಯನ್ನೇ ಅವಲಂಬಿಸಿದ್ದ ಗೃಹಬಳಕೆ ಹಾಗೂ ಹೋಟೆಲ್ ಮಾಲೀಕರು ಕಂಗಾಲಾಗಿದ್ದು, ಅನಿಶ್ಚಿತತೆಯ ನಡುವೆ ಎಲ್‌ಪಿಜಿಯನ್ನು ನಂಬಿ ಕುಳಿತರೆ ಆಗದೆಂದು ತಿಳಿದು ಇದೀಗ ಇಂಡಕ್ಷನ್ ಸ್ಟವ್ ಖರೀದಿಸುವತ್ತ ಮುಖ ಮಾಡಿದ್ದಾರೆ. ಪರಿಣಾಮ ಇಂಡಕ್ಷನ್ ಸ್ವವ್ಗಳ ಮಾರಾಟ ಮತ್ತು ಬೇಡಿಕೆ ತುಂಬಾ ಹೆಚ್ಚಾಗಿದ್ದು, ಜನರು ಎಲೆಕ್ಟ್ರಾನಿಕ್ಸ್ ಅಂಗಡಿಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಎಷ್ಟೋ ಅಂಗಡಿಗಳಲ್ಲಿ ಇಂಡಕ್ಷನ್ ಸ್ಟವ್ ಖಾಲಿಯಾಗಿದ್ದು, ಜನ ನಿರಾಸೆಯಿಂದ ಖಾಲಿ ಕೈಯಲ್ಲಿ ತೆರಳುತ್ತಿದ್ದಾರೆ. ಇಂತಹದ್ದೊಂದು ದೃಶ್ಯ ರಾಜಸ್ಥಾನದ ಅಜ್ಮೀರ್‌ದಿಂದ ಕಂಡು ಬಂದಿದೆ.
ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ಹಿನ್ನೆಲೆ ಪರ್ಯಾಯ ಮಾರ್ಗವಾಗಿ ಜನ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದಾರೆ. ಅಜ್ಮೀರ್ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಇವುಗಳ ಮಾರಾಟ ಹೆಚ್ಚಾಗಿದೆ. ಭಾರಿ ಬೇಡಿಕೆ ಹಿನ್ನೆಲೆ ಕೇವಲ ಒಂದೇ ದಿನಕ್ಕೆ ನಗರದ ಬುಹುತೇಕ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಬಂದ ತಕ್ಷಣ ಮಾರಾಟವಾಗುತ್ತಿವೆ. ಕಳೆದ 10 ದಿನಗಳಲ್ಲಿ ಮಾರಾಟವಾದ ಇಂಡಕ್ಷನ್ ಸ್ಟವ್ ಗಳ ಸಂಖ್ಯೆಯು ಒಂದು ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಅಂಗಡಿಯ ಮಾಲೀಕರೊಬ್ಬರು ಹೇಳಿಕೊಂಡಿದ್ದಾರೆ.
