ಉದಯವಾಹಿನಿ, ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಕೈದಿಗಳಿಗೆ‌ ವಾರ್ಡರ್‌ಗಳೇ ನಿಷೇಧಿತ ತಂಬಾಕು ಉತ್ಪನ್ನಗಳನ್ನ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಧಾರವಾಡ ಜೈಲಿನಲ್ಲಿ ನಿಷೇಧಿತ ಉತ್ಪನ್ನಗಳ ಪೂರೈಕೆ ಹಿಂದೆ ಬೇರೆ ಯಾರೂ ಇಲ್ಲ, ಇದೇ ಕಾರಾಗೃಹದ ವಾರ್ಡರ್‌ಗಳೇ ಇದ್ದಾರೆ ಎಂಬುದು ಕುತೂಹಲಕಾರಿ ಸಂಗತಿ. ಬೇಲಿಯೇ ಎದ್ದು ಹೊಲ ಮೇಯಿತು ಎಂಬಂತೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಇಬ್ಬರು ವಾರ್ಡರ್‌ಗಳು ಕೈದಿಗಳಿಗೆ ಸಿಗರೇಟು, ಗುಟ್ಕಾ ಶೀಟ್‌ಗಳನ್ನ ಪೂರೈಕೆ ಮಾಡುತ್ತಿದ್ದರು. ಕೊನೆಗೆ ಇಬ್ಬರನ್ನೂ ರೆಡ್‌ಹ್ಯಾಂಡಾಗಿ ಹಿಡಿದಿರುವ ಧಾರವಾಡ ಉಪನಗರ ಠಾಣೆ ಪೊಲೀಸರು, ಕಾರಾಗೃಹದ ಇಬ್ಬರು ವಾರ್ಡರ್‌ ಹಾಗೂ ಸಾಮಗ್ರಿ ಪೂರೈಸುತ್ತಿದ್ದ ಓರ್ವ ಆಟೋ ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!