ಉದಯವಾಹಿನಿ,ಬಳ್ಳಾರಿ: ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲ ಬಾರಿಗೆ Automatic Mobile App Based Cage locking System ಬಳಸಿ ಜಿಂದಾಲ್‌ನಲ್ಲಿದ್ದ ಮೂರು ಕರಡಿಗಳನ್ನು ಏಕಕಾಲಕ್ಕೆ ಸೆರೆಹಿಡಿದಿದ್ದಾರೆ. ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿಯ ಜಿಂದಾಲ್‌ನ ವಿದ್ಯಾನಗರದ ಟೌನ್‌ಶಿಪ್‌ನಲ್ಲಿ ಕಳೆದ 10 ತಿಂಗಳಿಂದ ಒಂದು ಕರಡಿ ಹಾಗೂ ಎರಡು ಮರಿಗಳು ಬೀಡು ಬಿಟ್ಟಿದ್ದವು. ಪ್ರತೀ ದಿನ ಕರಡಿಗಳನ್ನ ಕಂಡು ಜಿಂದಾಲ್ ಕಾರ್ಮಿಕರು, ನೌಕರರು ಹಾಗೂ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಮೂರು ಕರಡಿಗಳನ್ನ ಏಕಕಾಲದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್‌ ಆಪ್‌ ಮೂಲಕ ಬೋನ್‌ ಲಾಕ್‌ ಮಾಡಬಹುದು. ಈ ಹೊಸ ತಂತ್ರವನ್ನು ಬಳಸಿ ಅರಣ್ಯ ಅಧಿಕಾರಿಗಳು ಮೂರು ಕರಡಿಗಳನ್ನು ಸೆರೆಹಿಡಿದಿದ್ದಾರೆ. ಬಳಿಕ ಕರಡಿಗಳನ್ನ ರೇಡಿಯೋ-ಕಾಲರ್ ಅಳವಡಿಸಿ, ಕರಡಿ ಧಾಮಕ್ಕೆ ಬಿಡಲಾಯಿತು.

Leave a Reply

Your email address will not be published. Required fields are marked *

error: Content is protected !!