ಉದಯವಾಹಿನಿ, ಬೆಂಗಳೂರು: ಗಿರಿನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು ಆರ್‌ಸಿಬಿ ) ಅಭಿಮಾನಿಗಳು ರಕ್ತದಾನ ಮಾಡಿ ತಮ್ಮ ನೆಚ್ಚಿನ ತಂಡದ ಗೆಲುವಿಗೆ ಶುಭ ಹಾರೈಸಿದ್ದಾರೆ. ಪ್ರತಿ ವರ್ಷ ಆರ್‌ಸಿಬಿ ಮ್ಯಾಚ್‌ಗೂ ಮುನ್ನ ರಕ್ತದಾನ ಮಾಡುತ್ತೇವೆ. ಈ ಬಾರಿಯ ಉದ್ಘಾಟನಾ ಪಂದ್ಯ ಗೆಲ್ಲುವ ವಿಶ್ವಾಸವಿದೆ. ಅಲ್ಲದೇ ಮತ್ತೆ ಈ ಬಾರಿ ನಮ್ಮ ತಂಡ ಟ್ರೋಫಿ ಗೆಲ್ಲಲಿದೆ. ಆರ್‌ಸಿಬಿ ಗಾಡ್ ವಿರಾಟ್ ಕೋಹ್ಲಿಯನ್ನು ಗ್ರೌಂಡ್‌ಲ್ಲಿ ನೋಡೋದೇ ಚೆಂದ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ಸಾಮೂಹಿಕ ರಕ್ತದಾನ ಮಾಡಿದ ಅಭಿಮಾನಿಗಳು, ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಪ್ರಾರ್ಥಿಸಿದರು. ಬಳಿಕ ಕಳೆದ ಬಾರಿಯಂತೆ ಈ ಬಾರಿಯೂ ಕಪ್ ನಮ್ದೇ. ಕಳೆದ ಬಾರಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಅಭಿಮಾನಿಗಳ ನೆನಪು ಎಂದಿಗೂ ಕಾಡಲಿದೆ. ಆ ಅಭಿಮಾನಿಗಳಿಗೆ ಗೌರವ ಅರ್ಪಣೆ ಮಾಡುವಂತೆ ಆರ್‌ಸಿಬಿ ಆಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. 18 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ಒದಗಿಸುತ್ತಿರುವ ಐಪಿಎಲ್‌ನ 19ನೇ ಆವೃತ್ತಿಗೆ ಇಂದು (ಮಾ.28) ಚಾಲನೆ ಸಿಗಲಿದೆ. ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ, ಚಾಂಪಿಯನ್ ಆರ್‌ಸಿಬಿಯ ತವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷ ಬಳಿಕ ಉದ್ಘಾಟನಾ ಪಂದ್ಯ ನಡೆಯಲಿದೆ.
