ಉದಯವಾಹಿನಿ, ಕಾರವಾರ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತಮ್ಮ ಮರಿಮೊಮ್ಮಗ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆಗಿದ್ದರು. ಆ ವಯಸ್ಸಿನಲ್ಲೂ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮುಗ್ಧ ನಟನೆ ಮೂಲಕ ಅವರು ಹೆಸರು ಗಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದರು.

 

Leave a Reply

Your email address will not be published. Required fields are marked *

error: Content is protected !!