ಉದಯವಾಹಿನಿ, ಬೆಂಗಳೂರು: ನನ್ನ ಜೊತೆ ಮಾತ್ರ ಅಲ್ಲ ನನ್ನ ಸ್ನೇಹಿತೆ ಜೊತೆಗೂ ನೀನು ಸೇರಬೇಕು ಎಂದು ಮಹಿಳೆಯೊಬ್ಬಳು ತನ್ನ ಪತಿಗೆ ಟಾರ್ಚರ್‌ ನೀಡಿದ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ನನ್ನ ಪತ್ನಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿ ವಿಕೃತವಾಗಿ ವರ್ತಿಸುತ್ತಾಳೆ. ಸ್ನೇಹಿತೆಯರ ಜೊತೆ ಸ್ವೀಟ್ ಮೆಮೋರಿ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾಳೆ. ಅಲ್ಲದೇ ಮದುವೆಗೂ ಮುನ್ನ ಆಕೆಯ ಸಂಬಂಧಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡುತ್ತಾಳೆ ಎಂದು ಪತಿ ಆರೋಪಿಸಿದ್ದಾನೆ. ಕುಡಿದು ಬರುವುದು, ಸ್ನೇಹಿತರ ಜೊತೆ ಹೋಗುವುದು ಕಾಮನ್ ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಾಳೆ. ವಿಕೃತ ದೈಹಿಕ ಸಂಪರ್ಕಕ್ಕೆ ಒಪ್ಪದೇ ಇದ್ದಾಗ ಕಿರುಕುಳ ನೀಡುತ್ತಾಳೆ. ಈ ವಿಚಾರ ಗೊತ್ತಾಗುವ ಮುನ್ನ ಅವಳಿಗೆ ಒಡವೆಗಳನ್ನು ಕೊಟ್ಟಿದ್ದೇನೆ. ಆ ಒಡವೆಗಳನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾಳೆ ಎಂದು ನೊಂದ ಪತಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!