ಉದಯವಾಹಿನಿ, ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ನಟೋರಿಯಸ್‌ಗಳ ಬ್ಯಾರಕ್ ಚೇಂಜ್ ಮಾಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದೇ ತಡ, ಮಲಮೂತ್ರ ಹೋಗುವ ಗುಂಡಿಯಲ್ಲಿದ್ದ ಮೊಬೈಲ್ ಗಳನ್ನ ಹೊರತೆಗೆದು, ಅಲೋಕ್‌ ಕುಮಾರ್ ಮೊಬೈಲ್ ಕೊಟ್ರು, ಐಪಿಎಲ್ ಮ್ಯಾಚ್ ಇದೆ ಕಪ್ ನಮ್ದೆ ಅಂತಾ ವೀಡಿಯೊ ಮಾಡಿ ವೈರಲ್ ಮಾಡಿದ್ರು. ಇದೀಗ ಆ ಕೈದಿಗಳ ಬಣ್ಣ ಬಯಲಾಗಿದೆ.
ಹೌದು. ಈ ವಿಡಿಯೋ ಮಾಡಿದ್ದು ಬೇರೆಲ್ಲೂ ಅಲ್ಲ.. ಪರಪ್ಪನ ಅಗ್ರಹಾರ ಜೈಲಲ್ಲಿ.. ವಿಚಾರಣಾಧೀನ ಕೈದಿಗಳು ವಿಡಿಯೋ ಹರಿಬಿಟ್ಟು ತಗ್ಲಾಕೊಂಡಿದ್ದಾರೆ. ಅದೂ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ( ಹೆಸರಿಗೆ ಕಳಂಕ ತರಲು ಹೋಗಿ ಪೀಕಲಾಟಕ್ಕೆ ಸಿಲುಕಿದ್ದಾರೆ. ನಾಳೆ ಐಪಿಎಲ್ ಮ್ಯಾಚ್ ಇದೆ.. ಜೈಲಲ್ಲಿ ಟಿವಿ, ಮೊಬೈಲ್ ಇದೆ.. ನೆಟ್‌ಫ್ಲಿಕ್ಸ್ ಕೂಡ ಇದೆ.. ಇನ್ನು ಈ ಮೊಬೈಲ್‌ನ ಸಪ್ಲೈ ಮಾಡಿದ್ದೇ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಎಂದು ಕೈದಿಗಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!