ಉದಯವಾಹಿನಿ, ಬೆಂಗಳೂರು: ಶಾಸಕರು ಐಪಿಎಲ್ ಟಿಕೆಟ್ ಕೇಳೋದು ತಪ್ಪು, IPL ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್ ತಗೋಳಿ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ 4 ಟಿಕೆಟ್ ಕೊಡಬೇಕು ಎಂಬ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಮಾತನಾಡಿದರು. ಅಂದು ಘಟನೆ ಆದಾಗ ಯಾರು ಏನ್ ಮಾತಾಡಿದ್ರು? ಇಚ್ಚೆ ಇರೋರು ಅವರೇ ಹೋಗಿ ಟಿಕೆಟ್ ತೆಗೆದುಕೊಳ್ಳಬೇಕು. ಐಪಿಎಲ್ (IPL 2026) ಆಸಕ್ತಿ ಇರೋರು ಕಾಸು ಕೊಟ್ಟು ನೋಡೋದು ಒಂದೊಳ್ಳೆ ರೀತಿಯ ಬೆಳವಣಿಗೆ. ಏಕೆಂದ್ರೆ ಅದು ರಾಷ್ಟ್ರೀಯ ಕ್ರೀಡೆ ಅಲ್ಲ, ಕರ್ಮಷಿಯಲ್ ಗೇಮ್ ಅಷ್ಟೇ ಎಂದಿದ್ದಾರೆ. ಇಂದು ಡಿಕೆಶಿ ನೇತೃತ್ವದಲ್ಲಿ ಮತ್ತೊಂದು ಸಭೆ ಶಾಸಕರಿಗೆ 4 ಟಿಕೆಟ್ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 2ನೇ ಸುತ್ತಿನ ಸಭೆ ಆಯೋಜಿಸಲಾಗಿದೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಜೊತೆ ಸಭೆ ನಡೆಸಲಿದ್ದು, ಶಾಸಕರಿಗೆ 4 ಟಿಕೆಟ್ ಜೊತೆಗೆ ಪ್ರತ್ಯೇಕ ಸ್ಟ್ಯಾಂಡ್ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
