ಉದಯವಾಹಿನಿ, ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದಿನಿಂದ ದೊಡ್ಡ ಜಾತ್ರೆ ಸಂಭ್ರಮ ಕಳೆಗಟ್ಟಿದೆ. ಮುಂಜಾನೆಯಿಂದಲೂ ಶ್ರೀಕಂಠೇಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ವೈಭವದಿಂದ ಜರುಗುತ್ತಿವೆ. ಇತಿಹಾಸ ಪ್ರಸಿದ್ಧ ಗೌತಮ ಪಂಚಮ ರಥೋತ್ಸವ ನಡೆದಿದ್ದು, ಮುಂಜಾನೆ 5.50 ರಿಂದ 6.30 ರ ಶುಭ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತರು ಶ್ರೀಕಂಠಶ್ವೇರ ರಥ ಎಳೆದು ಕೃತಾರ್ಥರಾಗಿದ್ದಾರೆ ನಂಜನಗೂಡಿನ ಬೀದಿ ಬೀದಿಯಲ್ಲಿ ಗೌತಮ ಪಂಚ ರಥೋತ್ಸವ ಸಾಗಿದ್ದು, ರಥಕ್ಕೆ ಹಣ್ಣು ಜವನ ಎಸೆದು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ. ಬೀದಿ ಬೀದಿಯಲ್ಲಿ ಉಘೇ ನಂಜುಂಡೇಶ್ವರ ಘೋಷಣೆಗಳು ಕೇಳಿ ಬಂದವು.

 

Leave a Reply

Your email address will not be published. Required fields are marked *

error: Content is protected !!