ಉದಯವಾಹಿನಿ, ಹೈದರಾಬಾದ್‌: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ನೌಕಾಪಡೆಯ ಉದ್ಯೋಗಿಯೊಬ್ಬ, ಆಕೆಯನ್ನ ಕೊಂದು ಫ್ರಿಜ್‌ನಲ್ಲಿಟ್ಟಿದ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಕೃತ್ಯ ನಡೆದಿದೆ. ವಿಜಯನಗರ ಜಿಲ್ಲೆಯ ಮೂಲದ ಆರೋಪಿ ರವೀಂದ್ರ ವಿವಾಹಿತ ಮಹಿಳೆಯನ್ನ ಕೊಂದು ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ರವೀಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಗೊತ್ತಾಗಿದೆ.
ಇತ್ತೀಚಿಗೆ ಆರೋಪಿ ರವೀಂದ್ರ ಪತ್ನಿ ತವರು ಮನೆ ಸೇರಿದ್ದರಿಂದ ಮೌನಿಕಾ (28) ಎಂಬ ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದ. ಇತ್ತೀಚೆಗೆ, ಮೌನಿಕಾ ಹಣಕ್ಕಾಗಿ ಒತ್ತಡ ಹೇರಲು ಶುರು ಮಾಡಿದ್ದಾಳೆ. ರವೀಂದ್ರನ ಪತ್ನಿ ಕೂಡ ಊರಲ್ಲಿ ಇಲ್ಲದಿದ್ದ ಕಾರಣ ಆಕೆಯನ್ನ ಮನೆಗೆ ಆಹ್ವಾನಿಸಿದ್ದಾನೆ. ಇವರಿಬ್ಬರ ಭೇಟಿ ವೇಳೆ ವಾಗ್ವಾದ ನಡೆದು ರವೀಂದ್ರ ಮೌನಿಕಾಳನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಬಳಿಕ ಆಕೆಯ ದೇಹವನ್ನ ಕತ್ತರಿಸಿ, ಅರ್ಧ ಭಾಗವನ್ನ ಫ್ರಿಡ್ಜ್‌ನಲ್ಲಿ ಇನ್ನುಳಿದ ಅರ್ಧವನ್ನು 1 ಬಂಡಲ್‌ನಲ್ಲಿ ಸುತ್ತಿ ಮನೆಯ ಒಂದು ಮೂಲೆಯಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!