ಉದಯವಾಹಿನಿ, : ಜಾಗತಿಕ ಇಂಧನ ಸನ್ನಿವೇಶದ ಮೇಲೆ ಇರಾನ್​ ಯುದ್ಧ ಪರಿಣಾಮ ಬೀರುತ್ತಿರುವುದರಿಂದ ಕೇಂದ್ರ ಸರ್ಕಾರವು ಸೀಮೆಎಣ್ಣೆಯ ಸುತ್ತಲಿನ ನಿಯಮಗಳನ್ನು ಸಡಿಲಗೊಳಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಪೆಟ್ರೋಲ್ ಪಂಪ್‌ಗಳ ಮೂಲಕ ಗೃಹಬಳಕೆಗೆ ಮಾರಾಟ ಮಾಡಲು ಅವಕಾಶ ನೀಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾರ್ಚ್ 29 ರಂದು ಅಡುಗೆ ಅನಿಲ LPG ಮೇಲಿನ ಒತ್ತಡವನ್ನು ಕಡಿಮೆ ಮಾಡಲು 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ ನೀಡುವ ಅಧಿಸೂಚನೆಯನ್ನು ಪ್ರಕಟಿಸಿದೆ.
ಈ ಅಧಿಸೂಚನೆಯ ಪ್ರಕಾರ, ಈ ಹಿಂದೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉನ್ನತ ಸೀಮೆಎಣ್ಣೆ ತೈಲ ಮುಕ್ತ (PDS SKO) ಎಂದು ಘೋಷಿಸಲ್ಪಟ್ಟ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ PDS ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ಮತ್ತೆ ಪರಿಚಯಿಸಲಾಗುವುದು. LPG ಕೊರತೆಗಳನ್ನು ಎದುರಿಸುತ್ತಿರುವ ಮನೆಗಳು ಮೂಲಭೂತ ಗೃಹಬಳಕೆಯ ಅಗತ್ಯಗಳಿಗೆ ಅಗತ್ಯವಾದ ಇಂಧನವನ್ನು ನಿರಂತರ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಪಂಪ್‌ಗಳು ಮನೆಯ ಅಡುಗೆ ಮತ್ತು ಬೆಳಕಿನ ಅಗತ್ಯಗಳಿಗೆ ಬೇಕಾಗುವಷ್ಟು ಸೀಮಿತ ಪ್ರಮಾಣದ ಸೀಮೆಎಣ್ಣೆಯನ್ನು ಸಂಗ್ರಹಿಸಲು ಮತ್ತು ವಿತರಿಸಲು ಈ ಹೊಸ ನಿಯಮಗಳ ಅಡಿಯಲ್ಲಿ ಅನುಮತಿಸಲಾಗುವುದು.”ವಿಶ್ವದಾದ್ಯಂತ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುತ್ತಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಉನ್ನತ ಸೀಮೆಎಣ್ಣೆ ತೈಲ (SKO) ವನ್ನು PDS SKO ಮುಕ್ತವಾಗಿರುವ 21 ರಾಜ್ಯಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ (UTS) ತಾತ್ಕಾಲಿಕ ಹಂಚಿಕೆ ಮಾಡಲು ನಿರ್ಧರಿಸಿದೆ. ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಮನೆಗಳಿಗೆ ವಿತರಿಸಲು ನಿರ್ಧಿರಿಸಿದೆ” ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO)ಯ ಮುಖ್ಯ ನಿಯಂತ್ರಕರು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ತಾತ್ಕಾಲಿಕ ಅನುಮತಿಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!