ಉದಯವಾಹಿನಿ, ಈ ಸುಡು ಬೇಸಿಗೆಯಲ್ಲಿ ಆರೋಗ್ಯಕರವಾದದ್ದು ಏನಾದ್ರೂ ತಿನ್ಬೇಕು ಅಂದಾಗ ಪ್ರತಿಯೊಬ್ಬರು ಕೂಡ ಕಲ್ಲಂಗಡಿ ಹಣ್ಣನ್ನೇ ಆಯ್ಕೆ ಮಾಡೋದು. ಬೇಸಿಗೆಯಲ್ಲಿ ಹೇರಳವಾಗಿ ಸಿಗುವಂತಹ ಈ ಹಣ್ಣು ದೇಹವನ್ನು ತಂಪಾಗಿರಿಸುವುದಲ್ಲದೇ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ಹೆಚ್ಚಿನವರು ಈ ಬೇಸಿಗೆಯಲ್ಲಿ ಮಾರುಕಟ್ಟೆಯಿಂದ ನಿತ್ಯವೂ ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಾರೆ. ಈ ಕಲ್ಲಂಗಡಿ ಹಣ್ಣನ್ನು ತಿಂದ ಬಳಿದ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಬಹುತೇಕ ಎಲ್ಲರೂ ಸಹ ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ನಾವು ವೇಸ್ಟ್‌ ಎಂದು ಎಸೆಯುವ ಬದಲು ಈ ಕೆಲವು ಕೆಲವು ರುಚಿಕರ ರೆಸಿಪಿಗಳನ್ನು ತಯಾರಿಸಿ.
ಕಲ್ಲಂಗಡಿ ಸಿಪ್ಪೆ ಜಾಮ್: ಕಲ್ಲಂಗಡಿ ಸಿಪ್ಪೆಗಳಿಂದ ನೀವು ಸುಲಭವಾಗಿ ಜಾಮ್ ಮಾಡಬಹುದು. ಈ ಜಾಮ್ ಬ್ರೆಡ್ ನಿಂದ ಚಪಾತಿವರೆಗೆ ಎಲ್ಲದರ ಜೊತೆಗೆ ರುಚಿಕರವಾಗಿರುತ್ತದೆ. ಕಲ್ಲಂಗಡಿ ಸಿಪ್ಪೆಯಿಂದ ಜಾಮ್ ಮಾಡಲು, ಮೊದಲು ಸಿಪ್ಪೆಯ ಹಸಿರು ಬಣ್ಣದ ಪದರವನ್ನು ಸುಳಿದು ಬಳಿಕ ಉಳಿದ ಸಿಪ್ಪೆಯನ್ನುಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕತ್ತರಿಸಿದ ಕಲ್ಲಂಗಡಿ ಸಿಪ್ಪೆಗೆ, ಎರಡು ಕಪ್ ಸಕ್ಕರೆ, ನಿಂಬೆ ರಸ ಮತ್ತು 1 ಟೀಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ. ಇದೆಲ್ಲವನ್ನೂ ಜೆಲ್ಲಿ ಹದಕ್ಕೆ ಬರುವವರೆಗೆ ಬಿಸಿ ಮಾಡಿಕೊಳ್ಳಿ. ನೀವು ಸುವಾಸನೆಗಾಗಿ ದಾಲ್ಚಿನ್ನಿ ಕೂಡ ಸೇರಿಸಬಹುದು.

ಕಲ್ಲಂಗಡಿ ಸಿಪ್ಪೆಯ ಉಪ್ಪಿನಕಾಯಿ: ಮಾವಿನ ಕಾಯಿ, ನಿಂಬೆ, ನೆಲ್ಲಿಕಾಯಿ, ಕ್ಯಾರೆಟ್‌ ಸೇರಿದಂತೆ ಬಗೆ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಕಲ್ಲಂಗಡಿ ಸಿಪ್ಪೆಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು. ಈ ಉಪ್ಪಿನಕಾಯಿ ಮಾಡಲು, ನೀವು ಕಲ್ಲಂಗಡಿ ಸಿಪ್ಪೆಯ ಹಸಿರು ಸಿಪ್ಪೆಯನ್ನು ತೆಗೆದು ಉಳಿದ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಾವಿನಕಾವಿ ಉಪ್ಪಿನಕಾಯಿಯಂತೇ ಇದನ್ನೂ ತಯಾರಿಸಿ.
ಕಲ್ಲಂಗಡಿ ಸಿಪ್ಪೆ ಚಟ್ನಿ: ಕಲ್ಲಂಗಡಿ ಸಿಪ್ಪೆಯಿಂದ ರುಚಿಕರ ಚಟ್ನಿಯನ್ನು ತಯಾರಿಸಬಹುದು. ಈ ಚಟ್ನಿ ಮಾಡಲು, ಮೊದಲು 3 ರಿಂದ 4 ಕಪ್ ಕಲ್ಲಂಗಡಿ ಸಿಪ್ಪೆಯನ್ನು ತೆಗೆದುಕೊಳ್ಳಿ, ಆದರ ಹಸಿರು ಪದರವನ್ನು ತೆಗೆದುಹಾಕಿ. ಸಿಪ್ಪೆಯನ್ನು ಸಣ್ಣಗೆ ಕಟ್‌ ಮಾಡಿ ಅದಕ್ಕೆ ಒಂದು ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿಕಾಯಿ, ಸ್ವಲ್ಪ ಸಣ್ಣಗೆ ಹೆಚ್ಚಿದ ಶುಂಠಿ ಜೊತೆಗೆ ನಿಮಗೆ ಬೇಕಾಗಿರುವ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡರೆ ಕಲ್ಲಂಗಡಿ ಸಿಪ್ಪೆ ಚಟ್ನಿ ಸಿದ್ಧ.

Leave a Reply

Your email address will not be published. Required fields are marked *

error: Content is protected !!