ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಳೆಯಿಂದ ಘನತ್ಯಾಜ್ಯ ನಿರ್ವಹಣೆಗೆ ಹೊಸ ನಿಯಮಗಳು ಜಾರಿಯಾಗಲಿವೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ದೇಶಾದ್ಯಂತ ಏಕರೂಪ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಬರಲಿದ್ದು, ನಾಳೆಯಿಂದ ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳು ಜಾರಿಯಾಗಲಿದೆ. ಇದರ ಅನ್ವಯ ಸರಿಯಾಗಿ ಕಸ ವಿಂಗಡಣೆ ಮಾಡದೇ ಇದ್ದರೆ ಬೆಂಗಳೂರಿಗರಿಗೆ ಜಿಬಿಎ ದಂಡಾಸ್ತ್ರ ಪ್ರಯೋಗ ಮಾಡಲಿವೆ. ಸರಿಯಾಗಿ ಕಸ ವಿಂಗಡಣೆ ಮಾಡದೇ ನಿಯಮ ಉಲ್ಲಂಘಿಸಿದ್ರೆ ಮೊದಲ ಬಾರಿಗೆ 500 ರೂ., ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ರೆ 1,000 ರೂ ವಿಧಿಸಲಾಗುವುದು. ನಾಲ್ಕು ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಆಟೋಗಳಿಗೆ ಕೊಡಬೇಕು ಎಂದು ತಿಳಿಸಿದೆ.
1. ಹಸಿಕಸ
2. ಒಣಕಸ
3. ಸ್ಥಳೀಯ ನೈರ್ಮಲ್ಯ ಕಸ
4. ವಿಶೇಷ ತ್ಯಾಜ್ಯ ಕಸ

Leave a Reply

Your email address will not be published. Required fields are marked *

error: Content is protected !!