ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದುವರಿದಿದೆ. ಗ್ಯಾಸ್ ಸಿಲಿಂಡರ್ ಗೋಳಾಟ ತೀರದಂತಾಗಿದೆ. ಜನ ಗ್ಯಾಸ್ ಸಿಲಿಂಡರ್ ಹಾಹಾಕಾರಕ್ಕೆ ಕಂಗಾಲಾಗಿದ್ದಾರೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದು, ಗೃಹಬಳಕೆ, ಕಮರ್ಷಿಯಲ್, ಆಟೋ ಗ್ಯಾಸ್‌ಗೆ ಪರದಾಡುವಂತಾಗಿದೆ.
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಗೋಳಾಟ ಮುಂದುವರಿದಿದೆ. ಬೆಂಗಳೂರು ನಗರದ ಹಲವು ಏಜೆನ್ಸಿಗಳಿಗೆ ವಾಣಿಜ್ಯ ಸಿಲಿಂಡರ್ ತಲುಪಿಲ್ಲ. ಹೀಗಾಗಿ ಏಜೆನ್ಸಿ ಆವರಣಗಳಲ್ಲೇ ಖಾಲಿ ಖಾಲಿ ಸಿಲಿಂಡರ್‌ಗಳು ಉಳಿದಿವೆ. ಸಂಜಯನಗರದ ಎಚ್‌ಪಿ ಗ್ಯಾಸ್ ಏಜೆನ್ಸಿಗೆ ಗ್ರಾಹಕರು ಅಲೆದಾಡುತ್ತಿದ್ದಾರೆ. 20 ದಿನಗಳ ಹಿಂದೆ ಬುಕ್ ಮಾಡಿದ್ದ ಗೃಹಬಳಕೆ ಸಿಲಿಂಡರ್ ಈಗ ವಿತರಣೆ ಮಾಡಲಾಗ್ತಿದೆ. ಬುಕ್ ಮಾಡಿದ 20 ದಿನಗಳ ನಂತರ ಗ್ರಾಹಕರಿಗೆ ಸಿಲಿಂಡರ್ ಸಿಕ್ಕಿದೆ. ಈ ಮಧ್ಯೆ ಹೋಟೆಲ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಸಿಲಿಂಡರ್ ಸಪ್ಲೈ ಆಗ್ತಿದೆ. 10 ಸಿಲಿಂಡರ್ ವಿತರಣೆ ಮಾಡ್ತಿದ್ದ ಜಾಗಕ್ಕೆ 2-3 ಸಿಲಿಂಡರ್ ವಿತರಣೆ ಮಾಡಲಾಗ್ತಿದೆ.
ಬೆಂಗಳೂರಿನಲ್ಲಿ ಸಿಲಿಂಡರ್ ಟ್ರಬಲ್ ಮುಂದುವರಿದಿದೆ. ಮನೆಗಳಿಗೆ ಗ್ಯಾಸ್ ಸಪ್ಲೈಗೂ ಗ್ಯಾಸ್ ಏಜೆನ್ಸಿ ಪರದಾಡುವಂತಾಗಿದೆ. ಮಲ್ಲೇಶ್ವರದಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ 4,000 ಕ್ಕೂ ಹೆಚ್ಚು ಬಿಲ್ ಬಾಕಿ ಇದೆ. ಏಜೆನ್ಸಿಗೆ ಕಡಿಮೆ ಪ್ರಮಾಣದ ಸಿಲಿಂಡರ್ ಲೋಡ್ ಸಪ್ಲೈ ಆಗ್ತಿದೆ. ಇದರಿಂದ ದಿನೇ ದಿನೇ ಬಾಕಿ ಬಿಲ್ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ 50, 60 ಸಿಲಿಂಡರ್ ಮಾತ್ರ ಸಫ್ಲೈ ಆಗ್ತಿದೆ. ಹೀಗಾದ್ರೆ ಬಿಲ್ ಕ್ಲಿಯರ್ ಹೇಗೆ ಅನ್ನೋ ಟೆನ್ಷನ್ ಗ್ಯಾಸ್ ಏಜೆನ್ಸಿಗಳಿಗೆ ಶುರುವಾಗಿದೆ.
