ಉದಯವಾಹಿನಿ,  ಕಲಬುರಗಿ: ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಬಜೆಟ್ ಮಂಡನೆಗೂ ಮುನ್ನ ಇರಾನ್ ಪರಮೋಚ್ಚ ನಾಯಕ ಅಯೊತೊಲ್ಲಾ ಖಮೇನಿ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.
ಕಲಬುರಗಿ ನಗರದ ಟೌನ್‌ನಲ್ಲಿರುವ ಪಾಲಿಕೆಯ ಕಟ್ಟಡದಲ್ಲಿ ಇಂದು ಮಹಾನಗರ ಪಾಲಿಕೆ ಬಜೆಟ್ ಮಂಡನೆಯಿತ್ತು. ಈ ವೇಳೆ ಬಜೆಟ್ ಮಂಡನೆಗೂ ಮುನ್ನ ವಾರ್ಡ್ ನಂಬರ್ 24ರ ಸದಸ್ಯೆ ಸಯೀದಾ ನೂರ್ ಫಾತೀಮಾ ಜೈದಿ ಅವರು ಇರಾನ್ ಪರಮೋಚ್ಚ ನಾಯಕ ಅಯೊತೊಲ್ಲಾ ಖಮೇನಿ ಹತ್ಯೆಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಿದ್ದಾರೆ.ನಿರ್ಣಯ ಮಂಡನೆ ಬೆನ್ನಲ್ಲೇ ಪಾಲಿಕೆ ಮೇಯರ್, ಆಯುಕ್ತರು ಸೇರಿ ಬಿಜೆಪಿ ಕಾಂಗ್ರೆಸ್ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!