ಉದಯವಾಹಿನಿ, ರೋಮ್: ಇರಾನ್ ವಿರುದ್ಧ ಯುದ್ಧ ನಡೆಸುತ್ತಿರುವ ಅಮೆರಿಕಗೆ ಇಟಲಿ ಶಾಕ್ ನೀಡಿದೆ. ಸಿಸಿಲಿಯ ಸಿಗೊನೆಲ್ಲಾ ವಾಯುನೆಲೆಯನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ತನ್ನ ಬಾಂಬರ್ ವಿಮಾನಗಳು ಸಿಸಿಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಅಮೆರಿಕ ಲ್ಯಾಂಡಿಂಗ್‌ಗೆ ಅನುಮತಿ ಕೋರಿತ್ತು. ನಿರಾಕರಣೆಗೆ ಯಾವುದೇ ಕಾರಣವನ್ನು ನೀಡದಿದ್ದರೂ ಅಮೆರಿಕವು ಪ್ರಧಾನಿ ಜಾರ್ಜಿಯಾ ಮೆಲೋನಿ ಸರ್ಕಾರವನ್ನು ಮುಂಚಿತವಾಗಿ ಸಂಪರ್ಕಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ವಿಮಾನಗಳು ಇಟಲಿಯ ವಾಯುಪ್ರದೇಶವನ್ನು ಪ್ರವೇಶಿಸುವಾಗ ಅಥವಾ ನೆಲೆಯಲ್ಲಿ ಇಳಿಯುವಾಗ ಪಾಲಿಸಬೇಕಾದ ಅಧಿಕೃತ ಅನುಮತಿಯ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಇಟಲಿ ಹೇಳಿದೆ.ಸಿಗೊನೆಲ್ಲಾ ವಾಯುನೆಲೆಯನ್ನು ಕೇವಲ ಲಾಜಿಸ್ಟಿಕಲ್ ಮತ್ತು ತರಬೇತಿ ಉದ್ದೇಶಗಳಿಗಾಗಿ ಬಳಸಲು ದ್ವಿಪಕ್ಷೀಯ ಒಪ್ಪಂದಗಳಿವೆ. ಆದರೆ ಯುದ್ಧಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಅಥವಾ ಯುದ್ಧ ಕಾರ್ಯಾಚರಣೆಗಳಿಗೆ ಈ ನೆಲೆಯನ್ನು ಬಳಸುವುದು ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಟಲಿ ಸ್ಪಷ್ಟಪಡಿಸಿದೆ.
