ಉದಯವಾಹಿನಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಸಿನಿರಂಗದ ಪ್ರಮುಖರನ್ನು ಅನ್‌ಫಾಲೋ ಮಾಡಿದ ವಿಚಾರ ಚರ್ಚೆಯಾಗುತ್ತಿದ್ದ ನಡುವೆಯೇ, ಈಗ ‘ಕಾಂತಾರ’ ಚಿತ್ರದ ಸಾಧನೆ ಮತ್ತು ಕರಾವಳಿ ಭಾಗದ ಬೆಳವಣಿಗೆ ಬಗ್ಗೆ ಅವರು ಮಾತನಾಡಿದ್ದಾರೆ.
ಚಂದನವನ ಫಿಲ್ಡ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೇ ಮನಬಿಚ್ಚಿದ ಶೆಟ್ರು ‘ಕಾಂತಾರ’ ಹಾಗೂ ಅದರ ಮುಂದಿನ ಅಧ್ಯಾಯದ ಚಿತ್ರಿಕರಣಕ್ಕಾಗಿ ಕುಂದಾಪುರದ ಕೆರಾಡಿಯಲ್ಲಿ ನಿರ್ಮಿಸಲಾದ ಭವ್ಯ ಸೆಟ್ ಇದೀಗ ಆ ಭಾಗದ ಗುರುತಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಸೆಟ್ಗಳನ್ನು ಫಿಲ್ಮ ಸಿಟಿಗಳಲ್ಲಿ ನಿರ್ಮಿಸಲಾಗುತ್ತದೆ. ಆದರೆ, ಸ್ಥಳೀಯ ವಾತಾವರಣ ಮತ್ತು ಸಂಸ್ಕೃತಿಯನ್ನು ನೈಜವಾಗಿ ತೋರಿಸಲು ರಿಷಬ್ ಶೆಟ್ಟಿ ತಂಡ ಕೆರಾಡಿಯನ್ನೇ ಆಯ್ಕೆ ಮಾಡಿಕೊಂಡಿತ್ತು.

Leave a Reply

Your email address will not be published. Required fields are marked *

error: Content is protected !!