ಉದಯವಾಹಿನಿ, ಟೆಹ್ರಾನ್ (ಇರಾನ್): ಅಮೆರಿಕ- ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ 8 ನಾಗರಿಕರು ಸಾವನ್ನಪ್ಪಿದ್ದು, 95 ಜನರು ಗಾಯಗೊಂಡಿದ್ದಾರೆ ಎಂದು ಇರಾನಿನ ರಾಜ್ಯ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ. ಇರಾನ್ನ ಕರಜ್ನಲ್ಲಿರುವ ಬಿ1 ಸೇತುವೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಪರಿಣಾಮವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಅಪಾಯ ವರದಿಯಾಗಿದೆ.ಈ ದಾಳಿ ಸಮಯದಲ್ಲಿ ಇಲ್ಲಿ ಇರಾನಿ ಪ್ರವಾಸಿಗರು ಮತ್ತು ಸ್ಥಳೀಯ ಗ್ರಾಮದ ನಿವಾಸಿಗಳು ಈ ಸೇತುವೆ ಬಳಿ ಇದ್ದರು. ಅಲ್ಲದೇ ಪ್ರಕೃತಿ ದಿನವಾಗಿ ಅನೇಕ ಕುಟುಂಬಗಳ ಹೊರಾಂಗಣ ಪ್ರದೇಶದಲ್ಲಿ ಹೆಚ್ಚಿದ್ದ ಕಾರಣ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಈ ದಾಳಿ ಬೆನ್ನಲ್ಲೇ ಮಾತನಾಡಿರುವ ಇರಾನಿ ಅಧ್ಯಕ್ಷ ಮೌಸದ್ ಪೆಜೆಶ್ಕಿಯಾನ್, ಅಮೆರಿಕ ಮತ್ತು ಇಸ್ರೇಲಿ ಆಕ್ರಮಣದ ವಿರುದ್ಧ ಇರಾನ್ ತನ್ನ ಎಲ್ಲ ಸಾಮರ್ಥ್ಯಗಳನ್ನು ಬಳಕೆ ಮಾಡಿ ರಕ್ಷಣೆ ಮಾಡಿಕೊಳ್ಳುವ ಬಲವನ್ನು ಬಲವನ್ನು ಹೊಂದಿದೆ. ಈ ದಾಳಿಯು ಇಸ್ಲಾಮಿಕ್ ಗಣರಾಜ್ಯದ ವಿರುದ್ಧದ ಈ ಅಪ್ರಚೋದಿತ ಯುದ್ದ ಎಂದಿದ್ದಾರೆ.ಈ ನಡುವೆ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರೊಂದಿಗೆ ಇರಾನ್ ಅಧ್ಯಕ್ಷರು ದೂರವಾಣಿ ಸಂಭಾಷಣೆ ನಡೆಸಿದ್ದು, ವಾಷಿಂಗ್ಟನ್ ಜೊತೆ ಪರೋಕ್ಷ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಬಿಂಬಿಸಿದ್ದಾರೆ.
ಈ ಸಂಘರ್ಷದಲ್ಲಿ ಇರಾನ್ನ ಮೂಲಸೌಕರ್ಯಗಳು, ಪ್ರಮುಖ ಕೈಗಾರಿಕೆಗಳು ಹಾಗೇ ಶಾಲೆ ಮತ್ತು ಆಸ್ಪತ್ರೆಗಳು ದಾಳಿಯಿಂದ ನಾಶಗೊಂಡಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಜೆರ್ಬೈಜಾನ್ ಸರ್ಕಾರ ಮತ್ತು ಜನರು ತೋರಿದ ಮಾನವೀಯತೆ ಮತ್ತು ಬೆಂಬಲಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಅಜೆರ್ಬೈಜಾನ್ ಅಧ್ಯಕ್ಷ ಅಲಿಯೆವ್, ಯುದ್ದದ ಪರಿಣಾಮ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಪ್ರತಿಕೂಲ ಪರಿಣಾಮ ಕುರಿತು ತಿಳಿಸಿದರು. ಅಲ್ಲದೇ ಇರಾನ್ನಲ್ಲಿ ಶೀಘ್ರದಲ್ಲಿ ಶಾಂತಿ ಮರುಸ್ಥಾಪನೆಯ ಆಶಯ ವ್ಯಕ್ತಪಡಿಸಿದರು. ಇಬ್ಬರು ನಾಯಕರು ಭದ್ರತಾ ಪರಿಸ್ಥಿತಿ ಹೊರತಾಗಿ ವಿವಿಧ ಕ್ಷೇತ್ರದ ಸಹಕಾರ ಹೆಚ್ಚಳದ ಮಾರ್ಗ ಚರ್ಚಿಸಿದರು.ಇದರ ಜೊತೆಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ವಿ ಕೂಡ ಫಿಲಿಪಿನೋ ವಿದೇಶಾಂಗ ಸಚಿವರಾಗ ಮಾರಿಯಾ ತೆರೇಸಾ ಲಜಾರೊ ಮಾತುಕತೆ ನಡೆಸಿದರು. ಈ ವೇಳೆ ಹಾರ್ಮೂಜ್ ಜಲಸಂಧಿಯಲ್ಲಿ ಇರಾನ್ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಹಡಗುಗಳ ಸಂಚಾರ ತಡೆ ನಡೆಸಿರುವುದಾಗಿ ತಿಳಿಸಿದರು.
