ಉದಯವಾಹಿನಿ, ಕೋಪನ್​ಹೇಗನ್​ ​​ (ಡೆನ್ಮಾರ್ಕ್​): ಸರಿಸುಮಾರು 200 ವರ್ಷಗಳ ಹಿಂದೆ ಮುಳುಗಿದ್ದ ಡ್ಯಾನಿಶ್ ಯುದ್ಧನೌಕೆಯನ್ನು ಸಮುದ್ರ ಪುರಾತತ್ತ್ವ ತಜ್ಞರು ಕೋಪನ್​ಹೇಗನ್​ ಬಂದರಿನ ಸಮುದ್ರತಳದಲ್ಲಿ ಪತ್ತೆ ಮಾಡಿದ್ದಾರೆ. 19ನೇ ಶತಮಾನದ ಡ್ಯಾನೆಬ್ರೋಜ್​ ಯುದ್ದ ನೌಕೆಯನ್ನು15 ಮೀಟರ್ ಅಲೆಗಳ ಕೆಳಗೆ ದಟ್ಟವಾದ ಕೆಸರು ಮತ್ತು ಬಹುತೇಕ ಶೂನ್ಯ ಗೋಚರತೆಯಲ್ಲಿ ಕೆಲಸ ಮಾಡುವ ಡೈವರ್‌ಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಡೆನ್ಮಾರ್ಕ್‌ನ ವೈಕಿಂಗ್ ಶಿಪ್ ಮ್ಯೂಸಿಯಂ ನೀರೊಳಗಿನ ಉತ್ಖನನವನ್ನು ಮುನ್ನಡೆಸುತ್ತಿರುವ ಸಂಸ್ಥೆಯಾಗಿದ್ದು, ಇದು 1801ರ ಕೋಪನ್​ಹೇಗನ್​ ಕದನದಿಂದ ಮುಳುಗಿದ ಯುದ್ದ ನೌಕೆಯನ್ನು 225 ವರ್ಷಗಳ ಬಳಿಕ ಪತ್ತೆ ಮಾಡಿರುವುದಾಗಿ ಘೋಷಿಸಿದೆ. ಈ ಯುದ್ದ ನೌಕೆ ಡ್ಯಾನಿಶ್ ರಾಷ್ಟ್ರೀಯ ಭಾವನೆಯಾಗಿದೆ ಎಂದು ಮ್ಯೂಸಿಯಂನ ಕಡಲ ಪುರಾತತ್ತ್ವ ಶಾಸ್ತ್ರದ ಮುಖ್ಯಸ್ಥ ಮಾರ್ಟೆನ್ ಜೋಹಾನ್ಸೆನ್​ ತಿಳಿಸಿದ್ದಾರೆ. ಈ ಯುದ್ದವು ಉತ್ಸಾಹಭರಿತವಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದ್ದು, ಯುದ್ದ ಸಮಯದಲ್ಲಿ ಬ್ರಿಟಿಷ್​ ನೌಕಾಪಡೆಗಳಿಂದ ಬಾಂಬ್​ ಸ್ಪೋಟಿಸಿತ್ತು ಎಂಬುದನ್ನು ಕೇಳಿದ್ದೇವೆ. ಇದೀಗ ಸಿಕ್ಕಿರುವ ಅವಶೇಷದಿಂದ ನಾವು ಕಲಿಯಬಹುದಾಗಿದೆ ಎಂದಿದ್ದಾರೆ.

ಏನಿದು ಕೋಪನ್​ಹೇಗನ್​ ​ಕದನ: ಬ್ರಿಟಿಷ್​ ಮತ್ತು ಡ್ಯಾನಿಷರ ನಡುವಿನ ಯುದ್ದ ಇದಾಗಿದೆ. ನೆಲ್ಸನ್ ಮತ್ತು ಬ್ರಿಟಿಷ್ ನೌಕಾಪಡೆಯು ಡೆನ್ಮಾರ್ಕ್ ನೌಕಾಪಡೆಯ ಮೇಲೆ ದಾಳಿ ಮಾಡಿ ಸೋಲಿಸಿತ್ತು. ನೆಲ್ಸನ್​ರ ಮಹಾ ಯುದ್ಧಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ನೌಕಾ ಘರ್ಷಣೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಗಾಯಗೊಂಡಿದ್ದರು. ರಷ್ಯಾ ಮತ್ತು ಸ್ವೀಡನ್ ಸೇರಿದಂತೆ ಉತ್ತರ ಯುರೋಪಿಯನ್ ಶಕ್ತಿಗಳ ಮೈತ್ರಿಕೂಟದಿಂದ ಡೆನ್ಮಾರ್ಕ್ ಬಲವಂತಪಡಿಸುವುದು ಈ ಯುದ್ದದ ಉದ್ದೇಶವಾಗಿತ್ತು.

 

Leave a Reply

Your email address will not be published. Required fields are marked *

error: Content is protected !!