ಉದಯವಾಹಿನಿ, ಬೇಸಿಗೆ ಎಂದರೆ ತಣ್ಣನೆಯ ಪಾನೀಯ ಕುಡಿಯುವುದು ಮಾತ್ರವಲ್ಲ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪಾನೀಯಗಳನ್ನು ಸೇವಿಸುವುದೂ ತುಂಬಾ ಮುಖ್ಯ. ಬೇಸಿಗೆಯಲ್ಲಿ ಎಳನೀರು, ಕಲ್ಲಂಗಡಿ, ಕರ್ಬೂಜ ಸೇರಿದಂತೆ ವಿವಿಧ ಹಣ್ಣುಗಳು ಹೇರಳವಾಗಿ ಸಿಗುತ್ತವೆ. ಈ ಹಣ್ಣುಗಳು ಅಸಾಧಾರಣ ನೀರಿನಂಶವನ್ನು ಹೊಂದಿವೆ. ಕೆಲವು ಜನರು ಕೈಗೆಟುಕುವ ಕರ್ಬೂಜ ಹಣ್ಣಿನಿಂದ ಈ ರಿಫ್ರೆಶ್ ಪಾನೀಯ ತಯಾರಿಸುತ್ತಾರೆ.

ಕರ್ಬೂಜ ಹಣ್ಣಿ ಜೊತೆಗೆ ಸಬ್ಜಾ ಬೀಜಗಳು, ಸಾಬುದಾನಿ, ಕೆನೆಭರಿತ ಹಾಲು ಹಾಗೂ ಡ್ರೈಫ್ರೂಟ್ಸ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಸೇರಿಸಿ, ಮನೆಯಲ್ಲಿಯೇ ಸುಡುವ ಬಿಸಿಲಿಗೆ ಹೇಳಿ ಮಾಡಿಸಿದ ಕರ್ಬೂಜ ಜ್ಯೂಸ್​ ಸಿದ್ಧಪಡಿಸಬಹುದು. ಈ ಜ್ಯೂಸ್​​ನ ರುಚಿ ಅದ್ಭುತವಾಗಿರುತ್ತದೆ. ಇದೀಗ ತುಂಬಾ ರುಚಿಕರವಾದ ಕರ್ಬೂಜ ಜ್ಯೂಸ್​ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಕರ್ಬೂಜ ಹಣ್ಣು – 1 (ಅಂದಾಜು 250 ಗ್ರಾಂ)
ಸಬ್ಜಾ ಬೀಜಗಳು (ತುಳಸಿ ಬೀಜಗಳು) – 2 ಟೀಸ್ಪೂನ್
ಸಾಬುದಾನಿ – 2 ಟೀಸ್ಪೂನ್
ಕೆನೆಭರಿತ ಹಾಲು – 1 ಲೀಟರ್
ಕಸ್ಟರ್ಡ್ ಪುಡಿ – 2 ಟೀಸ್ಪೂನ್
ಸಕ್ಕರೆ – 100 ಗ್ರಾಂ
ಡ್ರೈಫ್ರೂಟ್ಸ್ – 2 ಟೀಸ್ಪೂನ್

Leave a Reply

Your email address will not be published. Required fields are marked *

error: Content is protected !!