ಉದಯವಾಹಿನಿ, ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್‌ 28 ರಂದು ನಡೆದ ಐಪಿಎಲ್‌ ಪಂದ್ಯದ ವೇಳೆ ಫ್ಯಾನ್ಸ್ ಗಳ ಮೊಬೈಲ್ ಗೆ ಕನ್ನ ಹಾಕಿದ್ದ ಜಾರ್ಖಂಡ್ ಖದೀಮರು ಮತ್ತಷ್ಟು ಮಂದಿ ಸಿಕ್ಕಿದ್ದಾರೆ. 9 ಮಂದಿ ಅಪ್ರಾಪ್ತರನ್ನ ಬಳಸಿಕೊಂಡು ಮೊಬೈಲ್ ಕದೀತಿದ್ದ ನಾಲ್ವರು ಬಂಧನವಾಗಿದ್ದು, 75 ಮೊಬೈಲ್‌ಗಳ ಸೀಜ್ ಮಾಡಲಾಗಿದೆ. ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್‌ ನಡುವಿನ ಐಪಿಎಲ್ ಮ್ಯಾಚ್ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ಮೊಬೈಲ್ ಕದ್ದವರ ಬಾಲ ಬೆಳೀತಾನೆ ಇದೆ.

ಮೊಬೈಲ್ ಕಳೆದುಕೊಂಡವರ ದೂರಿನ ಅನ್ವಯ ತನಿಖೆ ನಡೆಸಿ ಈವರೆಗೆ ಒಟ್ಟು ಎಪ್ಪತ್ತೈದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್ ನಿಂದ ಅಪ್ರಾಪ್ತರ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್‌ಕುಮಾರ್ ಮತ್ತು ಶುಭಮನ್ ಕುಮಾರ್ ನ ಗ್ಯಾಂಗ್ ಕೃತ್ಯ ಎಸಗಿತ್ತು. ಈ ನಾಲ್ವರು ಆರೋಪಿಗಳು 9 ಮಂದಿ ಅಪ್ರಾಪ್ತರನ್ನ ಕರೆತಂದು ಮೊಬೈಲ್ ಕಳ್ಳತನಕ್ಕೆ ಬಿಟ್ಟಿರೋದು ಗೊತ್ತಾಗಿದೆ. ಬೆಂಗಳೂರಲ್ಲದೇ ಚೆನ್ನೈ, ಮುಂಬೈ, ಕೋಲ್ಕತ್ತಾಗೆ ಹೋಗಿ ಸಾಕಷ್ಟು ಕಡೆಗಳಲ್ಲಿ ಈ ಗ್ಯಾಂಗ್ ಕೈಚಳಕ ತೋರಿದೆ.

Leave a Reply

Your email address will not be published. Required fields are marked *

error: Content is protected !!