ಉದಯವಾಹಿನಿ, ಬೆಂಗಳೂರು: ನಗರದ ಕೋಣನಕುಂಟೆ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಎದೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಆರೋಪದಡಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಏಪ್ರಿಲ್ 1 ರಂದು ಗಿರಿವರ್ಧನ್ ಎಂಬಾತನ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ (Drinks Party) ರಾಹುಲ್ ಎಂಬಾತನಿಗೆ ಚಾಕು ಇರಿದಿದ್ದು, ಗಿರಿವರ್ಧನ್‌ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 1 ರಂದು ರಾಹುಲ್, ದಿಲೀಪ್, ಸ್ಕಂದ, ಕಾರ್ತಿಕ್ ಹಾಗೂ ಗಿರಿವರ್ಧನ್ ಸೇರಿ ವಡ್ಡರಪಾಳ್ಯದಲ್ಲಿರುವ ಗಿರಿವರ್ಧನ್ ನಿವಾಸದಲ್ಲಿ ಪಾರ್ಟಿ ಮಾಡಿದ್ದರು.

ಮದ್ಯಪಾನ ಮಾಡುತ್ತಿದ್ದಾಗ ಯಾವುದೋ ಕ್ಷುಲ್ಲಕ ವಿಚಾರಕ್ಕೆ ರಾಹುಲ್ ಮತ್ತು ಗಿರಿವರ್ಧನ್ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಗಿರಿವರ್ಧನ್ ತನ್ನ ಕಾರಿನಿಂದ ಚಾಕು ತಂದು ರಾಹುಲ್ ಎದೆಗೆ ಇರಿದಿದ್ದಾನೆ.

Leave a Reply

Your email address will not be published. Required fields are marked *

error: Content is protected !!