ಉದಯವಾಹಿನಿ, ಇರಾನ್ ಯುದ್ಧವು ಈಗ ಜಾಗತಿಕ ಶಕ್ತಿ ಕ್ರಮವನ್ನು ಸಹ ಬದಲಾಯಿಸುವಂತೆ ತೋರುತ್ತಿದೆ. ಹೌದು, ಈಗ ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ನಡೆದಿರುವ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದು. 23 ವರ್ಷಗಳಲ್ಲಿ ಮೊದಲ ಬಾರಿಗೆ, ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳು ಅಮೆರಿಕಾದ ವಿರುದ್ಧ ವಿಶ್ವಸಂಸ್ಥೆಯಲ್ಲಿ ವೀಟೋ ಮತವನ್ನು ಚಲಾಯಿಸಿವೆ.
ಬಹ್ರೇನ್ ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನಿರ್ಣಯವನ್ನು ಸಲ್ಲಿಸಿತ್ತು.ಒಂದು ವೇಳೆ ಈ ನಿರ್ಣಯ ಅಂಗೀಕಾರವಾಗಿದ್ದರೆ ಇರಾನ್ ಗೆ ದೇಶಕ್ಕೆ ಸಂಕಷ್ಟ ಎದುರಾಗುತ್ತಿತ್ತು. ಆದಾಗ್ಯೂ ಫ್ರಾನ್ಸ್, ರಷ್ಯಾ ಮತ್ತು ಚೀನಾ ಜೊತೆಗೆ ಅದನ್ನು ವೀಟೋ ಮಾಡಿತು. ಇದಕ್ಕೂ ಮೊದಲು, 2003 ರ ಇರಾಕ್ ವಿರುದ್ಧದ ಯುದ್ಧದ ಸಮಯದಲ್ಲಿ ಅಮೆರಿಕ ನಡೆಯನ್ನು ವಿರೋಧಿಸಲು ವಿಟೋ ಮತವನ್ನು ಚಲಾವಣೆ ಮಾಡಿದ್ದವು.ವಿಶ್ವಸಂಸ್ಥೆಯೊಳಗೆ, ರಷ್ಯಾ, ಚೀನಾ, ಫ್ರಾನ್ಸ್, ಅಮೇರಿಕಾ ಮತ್ತು ಬ್ರಿಟನ್ ದೇಶಗಳು ವೀಟೋ ಅಧಿಕಾರವನ್ನು ಹೊಂದಿವೆ. ಇದನ್ನು P-5 ಅಥವಾ ಶಾಶ್ವತ ಐದು ಸದಸ್ಯ ರಾಷ್ಟ್ರಗಳು ಎಂದು ಕರೆಯಲಾಗುತ್ತದೆ. ಈಗ ಫ್ರಾನ್ಸ್‌ನ ಮತವು ಅಮೆರಿಕಕ್ಕೆ ಹಿನ್ನಡೆಯಾಗಿದೆ, ಏಕೆಂದರೆ ವಿಶ್ವಸಂಸ್ಥೆಯಲ್ಲಿ ಅದರ ಬಹುಮತವು ಈಗ 3-2 ಕ್ಕೆ ದುರ್ಬಲಗೊಂಡಿದೆ.

Leave a Reply

Your email address will not be published. Required fields are marked *

error: Content is protected !!