ಉದಯವಾಹಿನಿ, ಇರುವೆಗಳು ಕಳ್ಳಸಾಗಣೆದಾರರಿಗೆ ಬಂಗಾರದ ಮೊಟ್ಟೆ ಇಡುವ ಕೋಳಿ ಅಂತ ನಿಮ್ಗೆ ಗೊತ್ತೆ.? ಹೌದು.. ಪ್ರತಿ ಇರುವೆಯನ್ನು ಸಾವಿರಾರು ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಈಗ ವೈರಲ್ ಆಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಇರುವೆ ಸಾವಿರಾರು ರೂ.ಗಳಿಗೆ ಮಾರಾಟವಾಗುತ್ತಿದೆ ಎಂಬ ಅಂಶವು ವಿಜ್ಞಾನಿಗಳನ್ನು ಸಹ ಆಶ್ಚರ್ಯಗೊಳಿಸುತ್ತದೆ.
ಪ್ರಪಂಚದಾದ್ಯಂತ ವನ್ಯಜೀವಿ ಕಳ್ಳಸಾಗಣೆ ಬಗ್ಗೆ ನಾವು ಕೇಳುತ್ತೇವೆ. ಆದರೆ ಈಗ, ಕಳ್ಳಸಾಗಣೆದಾರರು ಇರುವೆಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಯಸ್… ಇದು ವಿಚಿತ್ರವೆನಿಸಬಹುದು, ಆದರೆ ಇತ್ತೀಚೆಗೆ, ವಿಮಾನ ನಿಲ್ದಾಣಗಳಲ್ಲಿನ ಕಸ್ಟಮ್ಸ್ ಅಧಿಕಾರಿಗಳು ವಿಚಿತ್ರ ದೃಶ್ಯಗಳನ್ನು ನೋಡಿದ್ದಾರೆ. ಪ್ಯಾಕೆಟ್‌ಗಳು, ಪರೀಕ್ಷಾ ಟ್ಯೂಬ್‌ಗಳು ಮತ್ತು ಗಾಜಿನ ಬಾಟಲಿಗಳಲ್ಲಿ ಅಡಗಿಸಿಟ್ಟಿದ್ದ ನೂರಾರು ಇರುವೆಗಳು ಸಿಕ್ಕಿಬಿದ್ದಿವೆ.
ಮಾರುಕಟ್ಟೆಯಲ್ಲಿ ರಾಣಿ ಇರುವೆಯ ಬೆಲೆ ಸುಮಾರು 21 ಸಾವಿರ ರೂಪಾಯಿಗಳು ಎಂದು ವರದಿಯಾಗಿದೆ. ಕಳ್ಳಸಾಗಣೆದಾರರು ಈ ಇರುವೆಗಳನ್ನು ಪರೀಕ್ಷಾ ಟ್ಯೂಬ್‌ಗಳಲ್ಲಿ ಅಡಗಿಸಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಾಗಿಸುತ್ತಿದ್ದಾರೆ. ರಾಣಿ ಇರುವೆಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೊಸ ವಸಾಹತುಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಅವು ತುಂಬಾ ಮೌಲ್ಯಯುತವಾಗಿವೆ.
ಇರುವೆ ಸಾಕಣೆ ಹವ್ಯಾಸ: ಚೀನಾ, ಯುರೋಪ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಇರುವೆ ಸಾಕಣೆ ಒಂದು ಐಷಾರಾಮಿ ಹವ್ಯಾಸವಾಗಿದೆ. ಜನರು ತಮ್ಮ ಡ್ರಾಯಿಂಗ್ ರೂಮ್‌ಗಳಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಇರುವೆಗಳನ್ನು ಬೆಳೆಸುತ್ತಿದ್ದಾರೆ. ಇದಕ್ಕೆ ಅಪರೂಪದ ರಾಣಿ ಇರುವೆಗಳೇ ಬೇಕಾಗುತ್ತವೆ.
