ಉದಯವಾಹಿನಿ, ಹಾಸನ: ದಂಪತಿ ಮೇಲೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಬಲಗೈ ಬಂಟನ ಪುತ್ರನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೈದ ಸೂಫಿಯಾನ್ ಮತ್ತು ಇತರರು ಹಾಗೂ ದಂಪತಿ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.
ಅರಸೀಕೆರೆ ಠಾಣೆ ಪಿಎಸ್‌ಐ ದಿಲೀಪ್‌ಕುಮಾರ್ ನೀಡಿದ ದೂರಿನ ಮೇರೆಗೆ ಸುಮೋಟೋ ಕೇಸ್ ದಾಖಲಿಸಲಾಗಿದೆ. ಏ.3 ರಂದು ತುಮಕೂರು ಜಿಲ್ಲೆಯ ತಿಪಟೂರು ಮೂಲದ ದಂಪತಿ ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ಬೈಕ್‌ನಲ್ಲಿ ತಮ್ಮ ಊರಿಗೆ ವಾಪಸ್ ಆಗುತ್ತಿದ್ದರು. ಅರಸೀಕೆರೆ ಪಟ್ಟಣದಲ್ಲಿ ಓವರ್‌ಟೆಕ್ ಮಾಡುವಾಗ ಬೈಕ್ ಟಚ್ ಆದ ವಿಚಾರಕ್ಕೆ ಜಗಳ ಶುರುವಾಗಿ ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸುಮೀವುಲ್ಲಾ ಪುತ್ರ ಸೂಫಿಯಾನ್, ಇತರರು ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಘಟನೆ ನಂತರ ಪೊಲೀಸರು ದಂಪತಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ಹೇಳಿಕೆ ಪಡೆದಿದ್ದರು. ಜೊತೆಗೆ ಸೂಫಿಯಾನ್ ಹೇಳಿಕೆಯನ್ನೂ ಪಡೆದಿದ್ದರು. ಈ ವೇಳೆ ಎರಡೂ ಕಡೆಯಿಂದ ತಪ್ಪಾಗಿದೆ ದೂರು ಬೇಡವೆಂದು ದಂಪತಿ ತೆರಳಿದ್ದರು. ಹಲ್ಲೆ ನಡೆಸಿದ ಸೂಫಿಯಾನ್, ಇತರರನ್ನು ಬಂಧಿಸುವಂತೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೀಗ ಅರಸೀಕೆರೆನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!