ಉದಯವಾಹಿನಿ, ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಇಂದು ಧಾರಾಕಾರ ಮಳೆ ಸುರಿಯಿತು. ಎಡೆಬಿಡದೆ ಸುರಿದ ಮಳೆ ಬಿಸಿಲ ಬೇಗೆಯಿಂದ ಬಸವಳಿದ ಜನರಿಗೆ ಕೊಂಚ ರಿಲೀಫ್ ನೀಡಿದೆ. ಚಿಕ್ಕಮಗಳೂರು ನಗರ, ತಾಲೂಕಿನ ಹಲವೆಡೆ ಹಾಗೂ ಮೂಡಿಗೆರೆ ತಾಲೂಕಿನ ಕೆಲವು ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಇದರಿಂದಾಗಿ ಕಾಫಿ, ಅಡಿಕೆ ಹಾಗೂ ಮೆಣಸು ಬೆಳೆಗಳಿಗೆ ಅನುಕೂಲವಾದಂತಾಗಿದೆ. ಮೂಡಿಗೆರೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನ ಗಾಳಿಸಹಿತ ಭಾರಿ ಮಳೆ ಸುರಿಯಿತು. ಅಲ್ಲಲ್ಲಿ ಮರ ಹಾಗೂ ಮರದ ಟೊಂಗೆಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.ಮೂರು ದಿನದ ಹಿಂದೆ ಇದೇ ರೀತಿ ಸುರಿದ ಮಳೆಗೆ ಬಿದರಹಳ್ಳಿ ಸಮೀಪ ಕ್ಯಾಂಟೀನ್ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿತ್ತು

Leave a Reply

Your email address will not be published. Required fields are marked *

error: Content is protected !!